ಸಾರಾಂಶ
ನಗರದ ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಸಂವಹನ ಪ್ರಕಾಶಕರು, ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ಸಾಹಿತಿ ಎಸ್. ರಾಮಪ್ರಸಾದ್ ಅವರ ‘ಮುಪ್ಪಿಗೆ ನೆನಪೇ ಸಂಜೀವಿನಿ’ ಕೃತಿ ಬಿಡುಗಡೆ ಸಮಾರಂಭ 
- ಸಾಹಿತಿ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಸಲಹೆ- ಎಸ್. ರಾಮಪ್ರಸಾದ್ ಅವರ ‘ಮುಪ್ಪಿಗೆ ನೆನಪೇ ಸಂಜೀವಿನಿ’ ಕೃತಿ ಬಿಡುಗಡೆಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ಯುವ ಪೀಳಿಗೆಯು ಪುಸ್ತಕಗಳನ್ನು ಖರೀದಿಸುವ ಮತ್ತು ಓದುವ ಸಂಸ್ಕೃತಿ ಹೆಚ್ಚಾಗುವಂತೆ ಮಾಡಬೇಕು. ಯುವ ಪೀಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಹೇಳಿದರು.ನಗರದ ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಸಂವಹನ ಪ್ರಕಾಶಕರು, ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ಸಾಹಿತಿ ಎಸ್. ರಾಮಪ್ರಸಾದ್ ಅವರ ‘ಮುಪ್ಪಿಗೆ ನೆನಪೇ ಸಂಜೀವಿನಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುಸ್ತಕ ಹೊರ ತಂದು ಓದಿಲ್ಲ ಅಂದರೆ ಅದರ ಸತ್ವ ಗೊತ್ತಾಗುವುದಿಲ್ಲ. ಇಂದು ಟಿವಿ, ಅಂತರ್ಜಾಲ ಮೊದಲಾದ ಕಾರಣಗಳಿಂದಾಗಿ ಪುಸ್ತಕಗಳನ್ನು ತೆರೆದು ಓದುತ್ತಿಲ್ಲ. ವರ್ಷ ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ ಎಂದರು.ಪುಸ್ತಕ ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ರವೀಂದ್ರ ಭಟ್ ಮಾತನಾಡಿ, ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವುದು ಹಿರಿಯರ ಕರ್ತವ್ಯ. ಹೊಸ ಹೊಸ ಪುಸ್ತಕಗಳನ್ನು ಓದಿದರೆ ಪ್ರಕಾಶಕರು ಮತ್ತು ಕೃತಿಕಾರರಿಗೆ ಅನುಕೂಲವಾಗಲಿದೆ ಎಂದರು.
ಕೃತಿ ಕುರಿತು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಡಾ.ಎಸ್.ಎ. ಮೋಹನಕೃಷ್ಣ ಮಾತನಾಡಿದರು. ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಕನ್ನಡ ಸಾಹಿತ್ಯ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಲೇಖಕ ಎಸ್. ರಾಮಪ್ರಸಾದ್, ಸಂವಹನ ಪ್ರಕಾಶಕರಾದ ಡಿ.ಎನ್. ಲೋಕಪ್ಪ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))