ಸಾರಾಂಶ
ಯುವ ಪ್ರತಿಭೆ ಅಭಯ್ ಹಾಗೂ ಭೂಮಿಕಾ ಜೋಡಿಯಾಗಿ ನಟಿಸಿರುವ ‘ಮಂಡ್ಯಹೈದ’ ಚಿತ್ರದ ಟೀಸರ್, ಹಾಡು ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆಗೊಂಡಿದೆ. ವಿ ಶ್ರೀಕಾಂತ್ ನಿರ್ದೇಶನ, ಚಂದ್ರಶೇಖರ್ ನಿರ್ಮಾಣದ ಈ ಚಿತ್ರವಿದು.
ಕನ್ನಡಪ್ರಭ ಸಿನಿವಾರ್ತೆ
ಯುವ ಪ್ರತಿಭೆ ಅಭಯ್ ಹಾಗೂ ಭೂಮಿಕಾ ಜೋಡಿಯಾಗಿ ನಟಿಸಿರುವ ‘ಮಂಡ್ಯಹೈದ’ ಚಿತ್ರದ ಟೀಸರ್, ಹಾಡು ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆಗೊಂಡಿದೆ. ವಿ ಶ್ರೀಕಾಂತ್ ನಿರ್ದೇಶನ, ಚಂದ್ರಶೇಖರ್ ನಿರ್ಮಾಣದ ಈ ಚಿತ್ರವಿದು.ನಿರ್ದೇಶಕ ವಿ ಶ್ರೀಕಾಂತ್, ‘ಮಂಡ್ಯ ಹುಡುಗನ ಲೈಫ್ ಜರ್ನಿ ಇಲ್ಲಿದೆ. ಪ್ರೀತಿ- ಪ್ರೇಮ ಹಾಗೂ ಕೌಟುಂಬಿಕ ಮನರಂಜನೆ ಪ್ರಮುಖ ಆಕರ್ಷಣೆ’ ಎಂದರು. ‘ನನ್ನ ನಿರ್ಮಾಣದ ಐದನೇ ಚಿತ್ರವಿದು. ನನ್ನ ಮಗ ಅಭಯ್ ನಟನೆಯ ಎರಡನೇ ಚಿತ್ರವಿದು. ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಮುದ್ದಾದ ಪ್ರೇಮ ಕತೆ ಈ ಚಿತ್ರದಲ್ಲಿದೆ’ ಎಂದು ಚಂದ್ರಶೇಖರ್ ಹೇಳಿಕೊಂಡರು.
ಅಭಯ್ ಮಾತನಾಡಿ ‘ಶಿವ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೀತಿಸುವವರಿಗೆ, ಪೋಷಕರಿಗೆ ಹಾಗೂ ಸ್ನೇಹಿತರಿಗೆ ಸಂದೇಶವಿರುವ ಸಿನಿಮಾ ಇದು’ ಎಂದರು.ನಾಯಕಿ ಭೂಮಿಕಾ ಹಾಗೂ ನಟರಾದ ತೇಜಸ್, ಗಜೇಂದ್ರ, ದರ್ಶನ್ ಸೂರ್ಯ, ಸುಖೇಶ್, ಚಿದಂಬರ ಇದ್ದರು. ಸುರೇಂದ್ರನಾಥ್ ಸಂಗೀತ, ಮನುಗೌಡ ಛಾಯಾಗ್ರಾಹಣ ಮಾಡಿದ್ದಾರೆ.