ಸಾರಾಂಶ
ಟಕ್ಕರ್ ಚಿತ್ರದ ಮನೋಜ್ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೇರಿದೆ. ದಿನಕರ್ ತೂಗದೀಪ ಅವರು ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಮನೋಜ್ ನಟನೆಯ ಮೂರನೇ ಚಿತ್ರ ಗಾರ್ಡನ್‌ಗೆ ಮುಹೂರ್ತ ಆಗಿದೆ. ಶಾಸಕ ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ನಿರ್ದೇಶಕ ದಿನಕರ್ ತೂಗುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಆರ್ಯನ್ ಮಹೇಶ್ ನಿರ್ದೇಶನದ ಚಿತ್ರವನ್ನು ಮುನಿರಾಜು ನಿರ್ಮಿಸುತ್ತಿದ್ದಾರೆ.ಮನೋಜ್, ‘ಕಂಟೆಂಟ್ ಇದ್ದರೆ ಮಾತ್ರ ಜನ ಸಿನಿಮಾ ನೋಡುತ್ತಾರೆ. ಅಂಥ ಕಂಟೆಂಟ್ ‘ಗಾರ್ಡನ್’ ಚಿತ್ರದಲ್ಲಿದೆ. ಕಮರ್ಷಿಯಲ್, ಮಾಸ್ ಸಿನಿಮಾಗಳ ಆಚೆಗೆ ಇದೊಂದು ಬೇರೆ ರೀತಿಯ ಕತೆ’ ಎಂದರು.
ಆರ್ಯನ್ ಮಹೇಶ್, ‘ಪೌರ ಕಾರ್ಮಿಕರ ಕತೆಯನ್ನು ಹೇಳುವ ಸಿನಿಮಾ. ಇಲ್ಲಿ ಸಂಬಂಧಗಳು ಇವೆ. ಸಣ್ಣ ಮಟ್ಟದಲ್ಲಿ ಮಾಫಿಯಾ ಕೂಡ ಇದೆ. ಚಿತ್ರದಲ್ಲಿ ಶೀರ್ಷಿಕೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಹೆಸರು ಬಳಸಿಕೊಳ್ಳಲು ಅನುಮತಿ ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು. ಅನುಪ್ರೇಮ, ಸೋನಂ ರೈ ಚಿತ್ರದ ನಾಯಕಿಯರು.