ಸುದೀಪ್‌ ಅವರ ‘ಮಾರ್ಕ್‌’ ಟೀಸರ್‌ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್‌ ಬಿಡುಗಡೆ ಆದ ಒಂದೇ ದಿನದಲ್ಲಿ 1 ಕೋಟಿಗೂ (10 ಮಿಲಿಯನ್‌) ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ದಾಖಲೆ ಮಾಡಿದೆ.  

 ಸಿನಿವಾರ್ತೆ

ನಟ ಸುದೀಪ್‌ ಅವರ ‘ಮಾರ್ಕ್‌’ ಟೀಸರ್‌ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್‌ ಬಿಡುಗಡೆ ಆದ ಒಂದೇ ದಿನದಲ್ಲಿ 1 ಕೋಟಿಗೂ (10 ಮಿಲಿಯನ್‌) ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ದಾಖಲೆ ಮಾಡಿದೆ. ‘ಮಾರ್ಕ್‌ ಬಗ್ಗೆ ಮಾತಾಡುವಾಗ ಮನಸ್ಸಿನೊಳಗೆ ಮಾತಾಡ್ಬೇಕು’ ಎನ್ನುವ ಟೀಸರ್‌ನ ಡೈಲಾಗ್‌ ಕಿಚ್ಚನ ಅಭಿಮಾನಿಗಳ ಪಾಲಿಗೆ ಟ್ರೆಂಡ್‌ ಡೈಲಾಗ್‌ ಎನಿಸಿಕೊಂಡಿದೆ.

ಟೀಸರ್‌ನ ಆ್ಯಕ್ಷನ್‌ ಸೀನ್‌ಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌

 ಅಲ್ಲದೆ ಟೀಸರ್‌ನ ಆ್ಯಕ್ಷನ್‌ ಸೀನ್‌ಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿವೆ.

ಸರೆಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಬಹುಭಾಷೆಯಲ್ಲಿ ಟೀಸರ್‌ ಬಿಡುಗಡೆ

ಸರೆಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಬಹುಭಾಷೆಯಲ್ಲಿ ಟೀಸರ್‌ ಬಿಡುಗಡೆ ಆಗಿದೆ. ಈಗಾಗಲೇ ಚಿತ್ರದ ‘ಸೈಕೋ ಸೈತಾನ್‌’ ಹಾಡನ್ನು ನೋಡಿದವರು ಮೆಚ್ಚಿಕೊಂಡಿದ್ದಾರೆ. ಇದಕ್ಕೂ ಮೊದಲು ಬಂದ ಟೈಟಲ್‌ ಟೀಸರ್ ಕೂಡ ಇದೇ ರೀತಿ ಕ್ರೇಜ್‌ ಹುಟ್ಟಿಸಿತ್ತು.

 ಈಗ ಚಿತ್ರದ ಇಂಟ್ರೋ ಟೀಸರ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಸುದೀಪ್‌ ಅವರು ಅಜಯ್‌ ಮಾರ್ಕೆಂಡೆ ಹೆಸರಿನ ಈ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್‌ ಕಾರ್ತಿಕ್‌ ನಿರ್ದೇಶನದ ಈ ಚಿತ್ರವನ್ನು ನಿರ್ದೇಶಿಸಿದ್ದು, ಶೇಖರ್‌ ಚಂದ್ರ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ. ಡಿಸೆಬರ್‌ 25ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.