‘ಫ್ರೆಂಡ್ಸ್’ ಕಾಮಿಡಿ ಸರಣಿ ಖ್ಯಾತಿಯ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ನಿಧನ
KannadaprabhaNewsNetwork | Published : Oct 30 2023, 12:31 AM IST
‘ಫ್ರೆಂಡ್ಸ್’ ಕಾಮಿಡಿ ಸರಣಿ ಖ್ಯಾತಿಯ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ನಿಧನ
ಸಾರಾಂಶ
ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
ಲಾಸ್ ಏಂಜಲೀಸ್: 21ನೇ ಶತಮಾನದ ಆರಂಭದಲ್ಲಿ ಎಲ್ಲರ ಮನೆಮಾತಾಗಿದ್ದ ‘ಫ್ರೆಂಡ್ಸ್’ ಕಾಮಿಡಿ ಸರಣಿ ಛಾಂಡ್ಲರ್ ಪಾತ್ರಧಾರಿ, ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ(54) ನಿಧನರಾಗಿದ್ದಾರೆ. ತಮ್ಮ ಮನೆಯಲ್ಲಿ ಅವರು ಶನಿವಾರ ಮುಳುಗಿ ನಿಧನರಾದ ರೀತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ‘ಮ್ಯಾಥ್ಯೂ ಪೆರ್ರಿ ಅವರು ವಾರ್ನರ್ ಬ್ರೋಸ್ ನಿರ್ಮಾಣ ಸಂಸ್ಥೆಯ ಪ್ರತಿಭಾನ್ವಿತ ನಟರಾಗಿದ್ದು, ಅವರ ಹಾಸ್ಯ ಶೈಲಿ ಪ್ರಪಂಚದಾದ್ಯಂತ ಅವರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈ ಘಟನೆ ಎಲ್ಲರಿಗೂ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳುತ್ತೇವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 1994-2004ರ ಅವಧಿಯಲ್ಲಿ ಹತ್ತು ಸರಣಿಗಳಲ್ಲಿ ಪ್ರಸಾರವಾದ ‘ಫ್ರೆಂಡ್ಸ್’ ಹಾಸ್ಯ ಕಾರ್ಯಕ್ರಮದಲ್ಲಿ ಛಾಂಡ್ಲರ್ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದ ಪೆರ್ರಿ ಎಮ್ಮಿ ಪ್ರಶಸ್ತಿಗೂ ಕೂಡ ನಾಮನಿರ್ದೇಶಿತರಾಗಿದ್ದರು. ನಂತರ ಅವರ ಸಂಭಾವನೆ ಒಂದು ಸಂಚಿಕೆಗೆ 8 ಕೋಟಿ ರು.ಗಳಿಗೆ ಏರಿಕೆಯಾಗಿತ್ತು.