ಸಾರಾಂಶ
ನಟ ಪೃಥ್ವಿ ಅಂಬರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಯಿತು. ‘ದಿಯಾ’ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ ಈಗ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ
ಕನ್ನಡಪ್ರಭ ಸಿನಿವಾರ್ತೆ ನಟ ಪೃಥ್ವಿ ಅಂಬರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಯಿತು. ‘ದಿಯಾ’ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ ಈಗ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಮಾಸ್ ಲುಕ್‌ನಿಂದ ಕೂಡಿದೆ.
ಉತ್ತರ ಕನ್ನಡ ನೆಲದ ಜನರ ಜಲದ ಜನಜೀವನದ ನಡುವಿನ ರೋಚಕ ಬದುಕುಗಳನ್ನು ತೆರೆದಿಡುವ ಕತೆಯ ಈ ಚಿತ್ರಕ್ಕೆ ದೇವರಾಜ್ ಪೂಜಾರಿ ನಿರ್ದೇಶನ, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಸಹ್ಯಾದ್ರಿ ಪ್ರೊಡಕ್ಷನ್ಸ್‌ನ ಬಿ ಎಸ್ ವಿಶ್ವನಾಥ್ ಅವರು ಚಿತ್ರದ ನಿರ್ಮಾಪಕರು.