ಕಲರ್ಸ್ ಕನ್ನಡದಲ್ಲಿ ರಮೇಶ್ ಇಂದಿರಾ ನಿರ್ದೇಶನದ ನನ್ನ ದೇವ್ರು

| Published : Jun 29 2024, 12:32 AM IST

ಕಲರ್ಸ್ ಕನ್ನಡದಲ್ಲಿ ರಮೇಶ್ ಇಂದಿರಾ ನಿರ್ದೇಶನದ ನನ್ನ ದೇವ್ರು
Share this Article
  • FB
  • TW
  • Linkdin
  • Email

ಸಾರಾಂಶ

ಕಲರ್ಸ್ ಕನ್ನಡ ವಾಹಿನಿ ಹೊಸ ಧಾರಾವಾಹಿಯನ್ನು ಸದ್ಯದಲ್ಲೇ ಪ್ರಾರಂಭಿಸುತ್ತಿದೆ.

ಕನ್ನಡಪ್ರಭ ಸಿನಿವಾರ್ತೆ

ಜುಗಾರಿ, ಲಾಸ್ಟ್ ಬಸ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್‌ ಅವರು ಕಿರುತೆರೆಗೆ ಬಂದಿದ್ದಾರೆ. ಇವರಿಗೆ ನಾಯಕಿಯಾಗಿ ಮಯೂರಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯನ್ನು ಪ್ರೇಕ್ಷಕರ ಮುಂದೆ ತರುತ್ತಿರುವುದು ‘ನನ್ನ ದೇವ್ರು’ ಧಾರಾವಾಹಿ. ಈ ಧಾರಾವಾಹಿಯನ್ನಿ ನಿರ್ದೇಶಕ, ಖ್ಯಾತ ನಟ ರಮೇಶ್ ಇಂದಿರಾ ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯ ಅದ್ದೂರಿ ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಿಸುತ್ತಿದ್ದಾರೆ.

ಈ ಧಾರಾವಾಹಿ ಸದ್ಯದಲ್ಲೇ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲು ಸಜ್ಜಾಗಿದೆ. ವಿ ಮನೋಹರ್‌, ಮಾಲತಿ ಸುಧೀರ್‌, ಯಮುನಾ ಶ್ರೀನಿಧಿ, ಪಲ್ಲವಿ, ವಿರಾಟ್‌ ಪ್ರಮುಖ ಪಾತ್ರಧಾರಿಗಳು.