ಮತ್ತೆ ತೆರೆ ಮೇಲೆ ನಾನು ಮತ್ತು ಗುಂಡ

| Published : Dec 15 2023, 01:30 AM IST

ಸಾರಾಂಶ

ಸಿಂಬ ಹೆಸರಿನ ನಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ನಾನು ಮತ್ತು ಗುಂಡ’ ಚಿತ್ರದ ಪಾರ್ಟ್‌ 2 ಸೆಟ್ಟೇರಿದ್ದು, ಅದರ ಟೈಟಲ್‌ ಟೀಸರ್‌ ಅನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಈ ಚಿತ್ರದ ರಚನೆ, ನಿರ್ದೇಶನದ ಜತೆಗೆ ನಿರ್ಮಾಣದ ಸಾರಥಿ ಆಗಿರುವುದು ರಘು ಹಾಸನ್‌ ಅವರು.

ಕನ್ನಡಪ್ರಭ ಸಿನಿವಾರ್ತೆ

ಸಿಂಬ ಹೆಸರಿನ ನಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ನಾನು ಮತ್ತು ಗುಂಡ’ ಚಿತ್ರದ ಪಾರ್ಟ್‌ 2 ಸೆಟ್ಟೇರಿದ್ದು, ಅದರ ಟೈಟಲ್‌ ಟೀಸರ್‌ ಅನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದರು.

ರಚನೆ, ನಿರ್ದೇಶನದ ಜತೆಗೆ ನಿರ್ಮಾಣದ ಸಾರಥಿ ಆಗಿರುವುದು ರಘು ಹಾಸನ್‌ ಮಾತನಾಡಿ, ‘ನಾಲ್ಕು ದಿನವಷ್ಟೇ ಚಿತ್ರೀಕರಣದಲ್ಲಿ ಭಾಗವಹಿಸಿ ಅಗಲಿದ ಸಿಂಬನ ಮಗ ಈಗ ಪಾರ್ಟ್‌ 2 ಕತೆಯ ಹೀರೋ. ಗೋವಿಂದೇಗೌಡ, ನಾಯಿಯ ಪಾತ್ರದ ಮೂಲಕ ಕತೆ ಮುಂದುವರೆಯಲಿದೆ. 50 ದಿನಗಳ ಶೂಟಿಂಗ್ ಆಗಿದೆ. 20 ದಿನದ ಚಿತ್ರೀಕರಣ ಬಾಕಿ ಇದೆ. ಸಿಂಬನ ಜತೆಗೆ ಇರುವ ‘ನಾನು’ ಪಾತ್ರವನ್ನು ಸದ್ಯದಲ್ಲೇ ರಿವೀಲ್ ಮಾಡುತ್ತೇವೆ’ ಎಂದರು.

ಧ್ರುವ ಸರ್ಜಾ, ‘ನಾನು ಮತ್ತು ಗುಂಡ ನನಗೆ ಮತ್ತು ನನ್ನ ಪತ್ನಿಗೆ ತುಂಬಾ ಇಷ್ಟವಾಗಿತ್ತು. ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದರು. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಸಂಭಾಷಣೆ, ಸಾಹಿತ್ಯ ರೋಹಿತ್ ರಮನ್, ಹಿನ್ನೆಲೆ ಸಂಗೀತ ರುತ್ವಿಕ್ ಮುರಳೀಧರ್, ಛಾಯಾಗ್ರಹಣ ತನ್ವಿಕ್‌, ಸಂಗೀತ ಆರ್ ಪಿ ಪಟ್ನಾಯಕ್ ಅವರದ್ದು.