ಧರ್ಮ ಹಾಗೂ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೈಸ್‌ ರೋಡ್‌ ಚಿತ್ರತಂಡಕ್ಕೆ ನೈಸ್ ಕಂಪನಿ ನೋಟಿಸ್

| Published : Aug 01 2024, 12:21 AM IST / Updated: Aug 01 2024, 11:32 AM IST

ಧರ್ಮ ಹಾಗೂ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೈಸ್‌ ರೋಡ್‌ ಚಿತ್ರತಂಡಕ್ಕೆ ನೈಸ್ ಕಂಪನಿ ನೋಟಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮ ಹಾಗೂ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೈಸ್ ರೋಡ್ ಚಿತ್ತಕ್ಕೆ ಟೈಟಲ್ ವಿವಾದ ಆವರಿಸಿಕೊಂಡಿದೆ.

 ಸಿನಿವಾರ್ತೆ

ಬಿಡುಗಡೆಗೆ ಸಜ್ಜಾಗಿದ್ದ ಧರ್ಮ ಹಾಗೂ ಜೋತಿ ರೈ ನಟಿಸಿರುವ ‘ನೈಸ್‌ ರೋಡ್‌’ ಚಿತ್ರಕ್ಕೆ ಈಗ ಕಾನೂನು ಕಂಟಕ ಎದುರಾಗಿದೆ. ಚಿತ್ರದ ಹೆಸರನ್ನು ಬದಲಿಸಲು ನೈಸ್‌ ಕಂಪನಿ ನೋಟಿಸ್ ನೀಡಿದೆ. ಈ ಸಿನಿಮಾ ಮೂಲಕ ನೈಸ್‌ ರಸ್ತೆ ಹೆಸರನ್ನು ಹಾಳು ಮಾಡುವ ಉದ್ದೇಶ ಇದೆ, ಹೀಗಾಗಿ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್‌ (ಬಿಎಂಐಸಿ) ಯೋಜನೆ ನೈಸ್‌ ರಸ್ತೆ ಹೆಸರಿನ ಸಿನಿಮಾ ಮಾಡಿರುವುದು ಸರಿಯಲ್ಲ ಎಂದು ನೈಸ್‌ ಕಂಪನಿ ತಿಳಿಸಿದೆ.

ಈ ಕುರಿತು ನಿರ್ದೇಶಕ, ನಿರ್ಮಾಪಕ ಗೋಪಾಲ್‌ ಹಳೆಪಾಳ್ಯ, ‘ನಮ್ಮ ಚಿತ್ರದ ಕತೆಗೂ ಹಾಗೂ ಬಿಎಂಐಸಿಯ ನೈಸ್‌ ರಸ್ತೆಗೂ ಯಾವುದೇ ಸಂಬಂಧ ಇಲ್ಲ. ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಚಿತ್ರಕ್ಕೆ ಹಣ ಹೂಡಿರುವ ಎನ್‌ ರಾಜೂ ಗೌಡ ಹಾಗೂ ಚಿತ್ರತಂಡದ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎನ್ನುತ್ತಾರೆ.