ಟ್ರೆಂಡಿಂಗ್‌ನಲ್ಲಿದೆ ಮ್ಯಾಟ್ನಿ ಚಿತ್ರದ ಹಾಡು

| Published : Mar 23 2024, 01:02 AM IST

ಸಾರಾಂಶ

ನೀನಾಸಂ ಸತೀಶ್, ಅದಿತಿ ಪ್ರಭುದೇವ ನಟನೆಯ ಮ್ಯಾಟ್ನಿ ಸಿನಿಮಾದ ಹಾಡು ಬಿಡುಗಡೆಯಾಗಿದ್ದು ಜನ ಮೆಚ್ಚುಗೆ ಗಳಿಸಿದೆ.

ಕನ್ನಡಪ್ರಭ ಸಿನಿವಾರ್ತೆ

ಮನಾಲಿಯ ಮಂಜಿನ ವಾತಾವರಣದಲ್ಲಿ ಚಿತ್ರೀಕರಣಗೊಂಡ ‘ಮ್ಯಾಟ್ನಿ’ ಚಿತ್ರದ ‘ನಿನಗಾಗಿ ಮಿಡಿಯುವುದು’ ಹಾಡು ಬಿಡುಗಡೆಯಾಗಿದ್ದು, ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿರುವ ಈ ಗೀತೆಗೆ ಹೇಮಂತ್ ಕುಮಾರ್ ಗಂಜಂ ಸಾಹಿತ್ಯ ರಚಿಸಿದ್ದಾರೆ. ಸಾಧ್ವಿನಿ ಕೊಪ್ಪ ಹಾಡಿದ್ದಾರೆ. ಸಂತು ಮಾಸ್ಟರ್‌ ನೃತ್ಯ ಸಂಯೋಜನೆ ಮಾಡಿದ್ದು ಪ್ರತಿಭಾವಂತ ಛಾಯಾಗ್ರಹಣ ಕೀರ್ತನ್‌ ಪೂಜಾರಿ ಚಿತ್ರೀಕರಣ ಮಾಡಿದ್ದಾರೆ.ಹಾಡು ಬಿಡುಗಡೆ ಜೊತೆಗೆ ಹಾಡಿನ ಮೇಕಿಂಗ್‌ ವಿಡಿಯೋ ಕೂಡ ಬಿಡುಗಡೆ ಆಗಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿರುವ ಈ ಹಾಡಿಡು ಮತ್ತು ಮೇಕಿಂಗ್‌ ವಿಡಿಯೋದಲ್ಲಿ ಮನಾಲಿಯ ದೃಶ್ಯ ವೈಭವ ನೋಡಬಹುದು.

ಈ ಚಿತ್ರವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಪಾರ್ವತಿ ಎಸ್ ಗೌಡ ನಿರ್ಮಾಣ ಮಾಡಿದ್ದಾರೆ. ಏ.5ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ರಚಿತಾ ರಾಮ್, ಶಿವರಾಜ್ ಕೆ ಆರ್ ಪೇಟೆ, ನಾಗಭೂಷಣ್ , ಪೂರ್ಣ ಮೈಸೂರು, ದಿಗಂತ್ ತಾರಾ ಬಳಗದಲ್ಲಿದ್ದಾರೆ.