ಹೊಸಬರ ‘ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ’ ಚಿತ್ರದ ಟ್ರೇಲರ್‌ ಮತ್ತು ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಜಗ್ಗಪ್ಪ, ಸುಶ್ಮಿತಾ ಅಭಿನಯದ, ವೇಂಪಲ್ಲಿ ಬಾವಾಜಿ ನಿರ್ದೇಶನದ ಚಿತ್ರವಿದು. ವಿಶೇಷ ಎಂದರೆ ಈ ಸಿನಿಮಾ ನಂತರ ನಿಜ ಜೀವನದಲ್ಲಿ ಜಗ್ಗಪ್ಪ ಹಾಗೂ ಸುಶ್ಮಿತಾ ಮದುವೆ ಆಗಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆಹೊಸಬರ ‘ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ’ ಚಿತ್ರದ ಟ್ರೇಲರ್‌ ಮತ್ತು ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಜಗ್ಗಪ್ಪ, ಸುಶ್ಮಿತಾ ಅಭಿನಯದ, ವೇಂಪಲ್ಲಿ ಬಾವಾಜಿ ನಿರ್ದೇಶನದ ಚಿತ್ರವಿದು. ವಿಶೇಷ ಎಂದರೆ ಈ ಸಿನಿಮಾ ನಂತರ ನಿಜ ಜೀವನದಲ್ಲಿ ಜಗ್ಗಪ್ಪ ಹಾಗೂ ಸುಶ್ಮಿತಾ ಮದುವೆ ಆಗಿದ್ದಾರೆ.

ಆನ್‌ಲೈನ್‌ನಲ್ಲಿ ಪರಿಚಯ ಆಗಿ ಪ್ರೀತಿ, ಪ್ರೇಮ ಎಂದು ಓಡಾಡುವ ಯುವ ಜೋಡಿಯ ಸುತ್ತ ಸಾಗುವ ಕತೆ ಈ ಚಿತ್ರದಲ್ಲಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ಸೀರುಂಡೆ ರಘು, ಗಜೇಂದ್ರ, ರಾಘವಿ, ಯಶಸ್ವಿನಿ, ಚಂದನ, ಶರಣ್ಯರೆಡ್ಡಿ, ದಯಾನಂದ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.