ಆಹಾರದಲ್ಲಿ ಸ್ವಾವಲಂಬನೆಗೆಪಾಕ್‌ ಸೇನೆ ಕೃಷಿ ಚಟುವಟಿಕೆ

| Published : Nov 04 2023, 12:32 AM IST

ಸಾರಾಂಶ

ಹಲವು ವರ್ಷಗಳಿಂದ ಸೇನೆ, ಯುದ್ಧ ಬಾಂಬುಗಳನ್ನು ನೋಡಿದ್ದ ಪಾಕಿಸ್ತಾನದ ಖೈಬರ್‌ ಪಖ್ತೂನ್‌ಖಾದಲ್ಲಿ ಕೃಷಿ ಚಟುವಟಿಕೆಗಳನ್ನು ಶುರು ಮಾಡಲು ಪಾಕ್‌ ಸೇನೆ ಸಿದ್ಧತೆ ನಿರ್ಧರಿಸಿದೆ.
- ವರ್ಷಗಳ ಕಾಲ ಸೇನೆ ವಶದಲ್ಲಿದ್ದ ಭೂಮಿ ಪೇಶಾವರ: ಹಲವು ವರ್ಷಗಳಿಂದ ಸೇನೆ, ಯುದ್ಧ ಬಾಂಬುಗಳನ್ನು ನೋಡಿದ್ದ ಪಾಕಿಸ್ತಾನದ ಖೈಬರ್‌ ಪಖ್ತೂನ್‌ಖಾದಲ್ಲಿ ಕೃಷಿ ಚಟುವಟಿಕೆಗಳನ್ನು ಶುರು ಮಾಡಲು ಪಾಕ್‌ ಸೇನೆ ಸಿದ್ಧತೆ ನಿರ್ಧರಿಸಿದೆ. ಅಫ್ಘಾನ್‌ ಗಡಿಯಲ್ಲಿರುವ ಈ ಪ್ರಾಂತ್ಯದಲ್ಲಿ ಪಾಕ್‌ ಸೇನೆ ತನ್ನ ಕಾರ್ಯಚರಣೆ, ಅಫ್ಘಾನಿಸ್ತಾನದೊಂದಿಗೆ ಯುದ್ಧ ನಡೆಸುತ್ತಿತ್ತು. ಇದರಿಂದಾಗಿ ಇಲ್ಲಿನ ಜನರ ಸ್ಥಳಾಂತರವಾಗಿತ್ತು. ಹಾಗಾಗಿ ಇಲ್ಲಿ ನಡೆಯುತ್ತಿದ್ದ ಕೃಷಿ ಚಟುವಟಿಕೆಗಳು ಸಂಪೂರ್ಣ ನಿಂತು ಹೋಗಿತ್ತು. ಇದೀಗ ಈ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆ ತನ್ನ ಕಾರ್ಯಚರಣೆ ನಿಲ್ಲಿಸಿ 2015ರಲ್ಲೇ ಪಡೆಗಳನ್ನು ಹಿಂಡೆದುಕೊಂಡಿರುವ ಕಾರಣ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಕೃಷಿ ನಡೆಸಲು ಸೇನೆ ಮುಂದಾಗಿದೆ.