ವಿಶ್ವ ಸಂಚಾರಿಯಾಗಿರುವ ಪಾರುಲ್‌ ಯಾದವ್‌ ಇದೀಗ ಗ್ರೀಸ್‌ನಲ್ಲಿದ್ದಾರೆ. ರೋಮ್‌ನ ಜಗತ್ಪ್ರಸಿದ್ಧ ಕೊಲೊಸಿಯಮ್‌ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ.

ಸಿನಿವಾರ್ತೆ

ವಿಶ್ವ ಸಂಚಾರಿಯಾಗಿರುವ ಪಾರುಲ್‌ ಯಾದವ್‌ ಇದೀಗ ಗ್ರೀಸ್‌ನಲ್ಲಿದ್ದಾರೆ. ರೋಮ್‌ನ ಜಗತ್ಪ್ರಸಿದ್ಧ ಕೊಲೊಸಿಯಮ್‌ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ.

‘ಕಣ್ಣಿಗೆ ಸೊಗಸಾಗಿ ಕಾಣುವ ಎಲ್ಲವೂ ಪರಿಪೂರ್ಣ ಸೌಂದರ್ಯ ಹೊಂದಿರುವುದಿಲ್ಲ. ಈ ನಾನು ನಿಂತಿರುವ ಈ ಕೊಲೊಸಿಯಮ್ ಅನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಅದ್ಭುತವಾದ ವಾಸ್ತುಶಿಲ್ಪ ಇದರದ್ದು. ಆದರೆ ಈ ವಾಸ್ತುಶಿಲ್ಪದ ಅದ್ಭುತವು ಮಾನವ ಇತಿಹಾಸದಲ್ಲಿ ಕೆಲವು ಕೆಟ್ಟ ಅಪರಾಧಗಳಿಗೆ ನೆಲೆಯಾಗಿತ್ತು’ ಎಂದು ಹೇಳಿದ್ದಾರೆ.

ರೋಮನ್‌ ಚಕ್ರವರ್ತಿಗಳು ನಿರ್ಮಿಸಿದ ಗಣಿತಶಾಸ್ತ್ರದ ವಿನ್ಯಾಸದಲ್ಲಿರುವ ಈ ಆಪ್ತ ರಂಗಮಂದಿರ ಈಗ ಮ್ಯೂಸಿಯಂ ಆಗಿದೆ. ರೋಮನ್ನರ ಕಾಲದಲ್ಲಿ ಇದು ಬಹುದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು. ಜ್ಯೂಯಿಶ್‌- ರೋಮನ್ ಯುದ್ಧದಲ್ಲಿ ಶತ್ರು ಸೈನಿಕರು ಈ ಸುಂದರ ರಂಗಮಂದಿರವನ್ನು ಧ್ವಂಸ ಮಾಡಿದ್ದರು.

ಇದರ ಜೊತೆಗೆ ಪಾರುಲ್‌ ಗ್ರೀಸ್‌ನ ಅನೇಕ ಪ್ರಾಚೀನ ತಾಣಗಳಿಗೆ ಭೇಟಿ ನೀಡಿದ್ದಾರೆ. ಪುರಾತನ ಚರ್ಚ್‌ಗಳು, ಟವರ್‌ ಆಫ್‌ ಪಿಸಾ, ಟ್ರೇವಿ ಕಾರಂಜಿ ಮೊದಲಾದೆಡೆ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.