‘ಕೆಜಿಎಫ್‌ ಸಿನಿಮಾಗೆ ವಿಜಯ್‌ ಸಾರ್‌ ದೊಡ್ಡ ಬಂಡವಾಳ ಹಾಕಿದ್ರು. ನಾವು ಅವರಷ್ಟೆಲ್ಲಾ ದೊಡ್ಡವರಲ್ಲ. ನಮ್ಮದು ಸೀಮಿತ ಬಜೆಟ್‌ ಸಿನಿಮಾ. ನಾವು ಕಾಟನ್‌ ಸೀರೆ ಉಟ್ಕೊಂಡಿದ್ದೀವಿ. ಅದು ರೇಷ್ಮೆ ಸೀರೆ ಥರ ನಿಮಗೆ ಕಾಣಿಸಿದರೆ ನಮ್ಮ ಪುಣ್ಯ.’

ಕೊತ್ತಲವಾಡಿ ಸಿನಿಮಾದ ಬಜೆಟ್‌ ಬಗ್ಗೆ ನಿರ್ಮಾಪಕಿ ಪುಷ್ಪಾ ಅರುಣ್‌ ಮಾತು

‘ಕೆಜಿಎಫ್‌ ಸಿನಿಮಾಗೆ ವಿಜಯ್‌ ಸಾರ್‌ ದೊಡ್ಡ ಬಂಡವಾಳ ಹಾಕಿದ್ರು. ನಾವು ಅವರಷ್ಟೆಲ್ಲಾ ದೊಡ್ಡವರಲ್ಲ. ನಮ್ಮದು ಸೀಮಿತ ಬಜೆಟ್‌ ಸಿನಿಮಾ. ನಾವು ಕಾಟನ್‌ ಸೀರೆ ಉಟ್ಕೊಂಡಿದ್ದೀವಿ. ಅದು ರೇಷ್ಮೆ ಸೀರೆ ಥರ ನಿಮಗೆ ಕಾಣಿಸಿದರೆ ನಮ್ಮ ಪುಣ್ಯ.’

- ಇದು ‘ಕೊತ್ತಲವಾಡಿ’ ಸಿನಿಮಾ ನಿರ್ಮಾಪಕಿ, ಯಶ್‌ ತಾಯಿ ಪುಷ್ಪಾ ಅರುಣ್‌ ಮಾತು.

‘ಯಶ್‌ ಗೌಪ್ಯವಾಗಿ ಬಂದು ಕೊತ್ತಲವಾಡಿ ಸಿನಿಮಾ ನೋಡುವ ಸಾಧ್ಯತೆ ಇದೆ. ಒಬ್ಬ ಸೆಲೆಬ್ರಿಟಿಯ ಮನೆಯವರಾಗಿದ್ದು, ಆ ಘನತೆಯನ್ನು ಮನಸ್ಸಲ್ಲಿಟ್ಟುಕೊಂಡು ಭಯ, ಭಕ್ತಿಯಲ್ಲಿ ಸಿನಿಮಾ ಮಾಡಿದ್ದೇವೆ. ಕದ್ದು ಮುಚ್ಚಿ ಸಿನಿಮಾ ಮಾಡಿಲ್ಲ. ಯಶ್‌ ಗಮನಕ್ಕೆ ತರದೇ ನಾನು ಸಿನಿಮಾ ನಿರ್ಮಾಣಕ್ಕಿಳಿದಿಲ್ಲ. ಜನ ಒಪ್ಕೊಂಡ್ರೆ ಅದೇ ಖುಷಿ. ಇವತ್ತು ನಾವು ಈ ಹಂತಕ್ಕೆ ಬಂದಿದ್ದೇವೆ ಅಂದರೆ ಅದರ ಹಿಂದೆ ದೊಡ್ಡ ಕಥೆ ಇದೆ. ಮನೆಯಲ್ಲಿ ಬಹಳ ಕಷ್ಟಪಟ್ಟಿದ್ದೇವೆ. ಮೈಸೂರಲ್ಲಿ ದೊಡ್ಡ ಮನೆಯಲ್ಲಿದ್ದವರು ಬೆಂಗಳೂರಿಗೆ ಬಂದು ಸಿಂಗಲ್‌ ಬೆಡ್‌ರೂಮ್‌ ಮನೆಯಲ್ಲಿದ್ದೆವು. ಯಶ್‌ ಬೆಂಗಳೂರಿಗೆ ಬಂದಾಗ ನಾವೂ ಅವನ ಜೊತೆಗೇ ಬಂದಿದ್ದೆವು. ನಮ್ಮ ಸ್ಟೋರಿ ಕೇಳಿದರೆ ನೀವು ಹಿಸ್ಟರಿ ಬುಕ್‌ ಮಾಡಬಹುದು’ ಎಂದೂ ಅವರು ಹೇಳಿದ್ದಾರೆ.

ಪೃಥ್ವಿ ಅಂಬಾರ್‌, ಕಾವ್ಯಾ ಶೈವ ನಟನೆಯ ‘ಕೊತ್ತಲವಾಡಿ’ ಸಿನಿಮಾದ ಟ್ರೇಲರ್‌ ಎಂಆರ್‌ಟಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಪೃಥ್ವಿ ಕಂಪ್ಲೀಟ್‌ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮ, ಸಂಬಂಧ, ಹಾಸ್ಯದ ಸ್ಪರ್ಶವೂ ಕಾಣುತ್ತದೆ. ಶ್ರೀರಾಜ್‌ ನಿರ್ದೇಶಕರಾಗಿರುವ ಈ ಚಿತ್ರ ಆಗಸ್ಟ್‌ 1ಕ್ಕೆ ತೆರೆ ಕಾಣಲಿದೆ.