‘ದಿ ಸರ್ವೈವರ್‌’ ಹೆಸರಿನಲ್ಲಿ ದುನಿಯಾ ವಿಜಯ್‌ ಪಾತ್ರ ಪರಿಚಯಿಸಿದ್ದ ‘ಲ್ಯಾಂಡ್‌ ಲಾರ್ಡ್‌’ ಚಿತ್ರತಂಡ ಇದೀಗ ‘ದಿ ರೂಲರ್‌’ ಹೆಸರಿನಲ್ಲಿ ರಾಜ್‌ ಬಿ. ಶೆಟ್ಟಿ ಪಾತ್ರದ ಲುಕ್‌, ಟೀಸರ್‌ ಬಿಡುಗಡೆ ಮಾಡಿದೆ.

 ಸಿನಿವಾರ್ತೆ

‘ದಿ ಸರ್ವೈವರ್‌’ ಹೆಸರಿನಲ್ಲಿ ದುನಿಯಾ ವಿಜಯ್‌ ಪಾತ್ರ ಪರಿಚಯಿಸಿದ್ದ ‘ಲ್ಯಾಂಡ್‌ ಲಾರ್ಡ್‌’ ಚಿತ್ರತಂಡ ಇದೀಗ ‘ದಿ ರೂಲರ್‌’ ಹೆಸರಿನಲ್ಲಿ ರಾಜ್‌ ಬಿ. ಶೆಟ್ಟಿ ಪಾತ್ರದ ಲುಕ್‌, ಟೀಸರ್‌ ಬಿಡುಗಡೆ ಮಾಡಿದೆ.

ನಾನು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮೊದಲ ಕಾರಣ ಜಡೇಶ್‌

ರಾಜ್‌ ಬಿ. ಶೆಟ್ಟಿ, ‘ನಾನು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮೊದಲ ಕಾರಣ ಜಡೇಶ್‌. ನಿರ್ದೇಶಕ ಗೆಲ್ಲಬೇಕು ಎಂದುಕೊಳ್ಳುವವನು ನಾನು. ನಿರ್ದೇಶಕನ ಕನಸು ನನ್ನಿಂದ ಗೆಲ್ಲುತ್ತದೆ ಎಂದರೆ ನಾನು ಯಾಕೆ ನಟಿಸಬಾರದು ಅನಿಸಿತು. ಶೋಷಕ ವರ್ಗದಲ್ಲಿರುವ ಪಾತ್ರ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ವ್ಯಕ್ತಿಯ ಪಾತ್ರ. ವಿಗ್‌ ನನಗೆ ಸೆಟ್‌ ಆಗದಿದ್ದರೂ ಈ ಚಿತ್ರದ ಪಾತ್ರಕ್ಕಾಗಿ ವಿಗ್‌ ಮತ್ತು ನಾನು ಒಟ್ಟಿಗೆ ನಟಿಸಿದ್ದೇವೆ. ಲುಕ್ಕು ವಿಶೇಷವಾಗಿದೆ. ಕೋಲಾರ ಕಡೆಯ ಭಾಷೆ ಮಾತನಾಡುತ್ತೇನೆ’ ಎಂದರು.

ನಮ್ಮನ್ನು ಜನ ಎಷ್ಟೋ ಆಡಿಕೊಂಡಿದ್ದಾರೆ

ದುನಿಯಾ ವಿಜಯ್‌, ‘ನಾನು 15 ವರ್ಷಗಳ ಹಿಂದೆ ‘ನನ್ತಾವ ಇರೋದು ಎರಡೇ ಎರ್ಡು ಟೊಮೆಟೋ, 15 ರೂಪಾಯಿ ಕಾಣಣ್ಣ’ ಅಂತ ಬಂದೆ. ಆ ನಂತರ ರಾಜ್‌ ಶೆಟ್ಟಿ ಒಂದು ಮೊಟ್ಟೆ ಇಟ್ಕೊಂಡು ಬಂದ್ರು. ಆಗ ನಮ್ಮನ್ನು ಜನ ಎಷ್ಟೋ ಆಡಿಕೊಂಡಿದ್ದಾರೆ. ಈಗ ನಾನು ‘ಸರ್ವೈವರ್’, ರಾಜ್‌ ‘ರೂಲರ್’. ನಮ್ಮನ್ನು ಅವಮಾನ ಮಾಡಿದವರಿಗೆ ನಾವೇನು ಅಂತ ತೋರಿಸುತ್ತಿದ್ದೇವೆ. ಇನ್ನೂ ಗಟ್ಟಿಯಾಗಿ ನೆಲೆ ನಿಂತು ಮತ್ತಷ್ಟು ತೋರಿಸುತ್ತೇವೆ’ ಎಂದರು.

ಜಡೇಶ್‌ ಕೆ ಹಂಪಿ, ‘ಮೊದಲು ರಾಜ್‌ ಬಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಲು ಒಪ್ಪಲಿಲ್ಲ. ನನ್ನ ಬಲವಂತ ಮತ್ತು ಆಸಕ್ತಿಗೆ ಓಕೆ ಅಂದರು’ ಎಂದರು.

ಜಡೇಶ್‌ ಕೆ. ಹಂಪಿ ನಿರ್ದೇಶಿಸಿರುವ, ಕೆ.ವಿ. ಸತ್ಯಪ್ರಕಾಶ್‌ ಹಾಗೂ ಹೇಮಂತ್‌ ಗೌಡ ಕೆ.ಎಸ್‌. ನಿರ್ಮಾಣದ ಈ ಚಿತ್ರದಲ್ಲಿ ರಚಿತಾ ರಾಮ, ರಿತನ್ಯಾ, ಶಿಶಿರ್‌, ಭಾವನಾ ರಾವ್‌, ಮಿತ್ರಾ ಕಾಣಿಸಿಕೊಂಡಿದ್ದಾರೆ.