ಸಾರಾಂಶ
ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ಮುಖ್ಯ ಪಾತ್ರದಲ್ಲಿ ನಟನೆ500 ವರ್ಷಗಳ ರೋಚಕ ದೃಶ್ಯಕಾವ್ಯಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗುತ್ತಿರುವ ಹೊತ್ತಿನಲ್ಲೇ ರಾಮಮಂದಿರ ಕಟ್ಟುವ ಹಿಂದಿನ 500 ವರ್ಷಗಳ ಹೋರಾಟದ ಕುರಿತು ‘695’ ಸಿನಿಮಾ ಸಿದ್ಧವಾಗಿದೆ. ರಾಮಮಂದಿರ ಉದ್ಘಾಟನೆಯ 3 ದಿನ ಮುನ್ನ, ಅಂದರೆ ಜ.19ರಂದು ಚಿತ್ರ ಬಿಡುಗಡೆ ಆಗಲಿದೆ.ರಜನೀಶ್ ಬೆರ್ರಿ ನಿರ್ದೇಶನ ಮತ್ತು ಶಾದಾನಿ ಫಿಲಂಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ರಾಮಾಯಣದ ರಾಮ ಪಾತ್ರಧಾರಿ ಅರುಣ್ ಗೋವಿಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘695 ಚಿತ್ರವು ಭಾರತವು ಸಂಸ್ಕೃತಿ ಮತ್ತು ಹಿರಿಮೆಯ ಪ್ರತಿಬಿಂಬವಾಗಿದೆ. ಇದು ಬಾಬರ್ ರಾಮಮಂದಿರವನ್ನು ಕೆಡವಿದಾಗಿನಿಂದ 2024ರಲ್ಲಿ ರಾಮಮಂದಿರ ಉದ್ಘಾಟನೆಯಾಗುವವರೆಗೆ ನಡೆದ ಘಟನೆಗಳನ್ನು ದೃಶ್ಯಕಾವ್ಯವಾಗಿ ನಿಮ್ಮ ಮುಂದೆ ಕಟ್ಟಿಕೊಡಲಿದೆ’ ಎಂದು ತಿಳಿಸಿದ್ದಾರೆ.ಏನಿದು 695?:ಬಾಬರಿ ಮಸೀದಿಯನ್ನು ಕೆಡವಿದ ದಿನಾಂಕ ‘6’ ಡಿಸೆಂಬರ್, ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಹಸಿರು ನಿಶಾನೆ ದೊರೆತದ್ದು ‘9’ನೇ ನವೆಂಬರ್ ಮತ್ತು ರಾಮಮಂದಿರ ಶಿಲಾನ್ಯಾಸ ನಡೆದ ‘5’ನೇ ಆಗಸ್ಟ್ ದಿನಾಂಕಗಳನ್ನು ಕ್ರೋಢೀಕರಿಸಿ 695 ಎಂದು ಹೆಸರಿಡಲಾಗಿದೆ ಎಂದು ನಿರ್ಮಾಪಕರಾದ ಶ್ಯಾಂ ಚಾವ್ಲಾ ತಿಳಿಸಿದ್ದಾರೆ.