ಸಾರಾಂಶ
ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ ಅವರು ಮದುವೆ ಆಗುವ ಆಸೆ ವ್ಯಕ್ತ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಜೊತೆ ವಿದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ಹೇಳಿದ್ದಾರೆ.
ಬೆಂಗಳೂರು : ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ ಅವರು ಮದುವೆ ಆಗುವ ಆಸೆ ವ್ಯಕ್ತ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಜೊತೆ ವಿದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ವಿದೇಶದಲ್ಲಿ ನಡೆದ ಕಾರ್ಯಕ್ರಮ
ಇತ್ತೀಚೆಗೆ ವಿದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ‘ಕೆಲ ದಂಪತಿಯನ್ನು ಭೇಟಿಯಾದಾಗ ಸಿಂಗಲ್ಲಾಗಿರೋದೇ ಬೆಟರ್ ಅನಿಸುತ್ತೆ. ಆದರೆ ಶಿವಣ್ಣ ಗೀತಕ್ಕ ಜೋಡಿ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿತು. ಅವರಿಬ್ಬರೂ ಸುಖ-ದುಃಖ ಹಂಚಿಕೊಳ್ಳುವ ರೀತಿ, ಅವರ ಒಡನಾಟ, ತಮಾಷೆ, ಸ್ನೇಹಿತರಂತೆ ಇರುವ ಬಗೆ ನೋಡಿ ಮನಸ್ಸು ಬದಲಾಯಿಸಿಕೊಂಡೆ. ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ಹೇಳಿದ್ದಾರೆ.
ಕಂಬ್ಯಾಕ್ ಸಿನಿಮಾವೂ ಸ್ಯಾಂಡಲ್‌ವುಡ್ ಕಿಂಗ್ ಜೊತೆ
ಅದರ ಜೊತೆ ಸಿನಿಮಾಗೆ ವಾಪಸ್ ಬರುವ ಕುರಿತು ಮಾತನಾಡಿದ ಅವರು, ‘ಶಿವಣ್ಣ ಜೊತೆಗೆ ನಟಿಸಿದ್ದ ಆರ್ಯನ್ ನಾನು ರಾಜಕೀಯ ಪ್ರವೇಶಕ್ಕೂ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ನಟಿಸಿದ್ದ ನನ್ನ ಕೊನೆಯ ಸಿನಿಮಾ ಆಗಿತ್ತು. ನನ್ನ ಕಂಬ್ಯಾಕ್ ಸಿನಿಮಾವೂ ಸ್ಯಾಂಡಲ್‌ವುಡ್ ಕಿಂಗ್ ಜೊತೆಗೇ ಆಗಲಿದೆ’ ಎನ್ನುವ ಮೂಲಕ ಶಿವಣ್ಣನೊಂದಿಗೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡುವ ಸೂಚನೆ ನೀಡಿದ್ದಾರೆ.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))