ಸಾರಾಂಶ
ನನ್ನ ಬದುಕಿಗೆ ಬಂದದ್ದಕ್ಕೆ ಥ್ಯಾಂಕ್ಸ್ ಎಂದು ರಶ್ಮಿಕಾ ಮಾಡಿರುವ ಪೋಸ್ಟ್ ಈಗ ಟ್ರೆಂಡಿಂಗ್ ಆಗಿದೆ.
ಕನ್ನಡಪ್ರಭ ಸಿನಿವಾರ್ತೆ
‘ಒಂದು ವಿಚಾರ ನಾನಿಲ್ಲಿ ಹೇಳಬೇಕು. ನನ್ನ ಬದುಕಿಗೆ ಬಂದದ್ದಕ್ಕೆ ನಿನಗೆ ಥ್ಯಾಂಕ್ಸ್!’- ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಪೋಸ್ಟ್ ಶೇರ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ ರಶ್ಮಿಕಾ ಮಂದಣ್ಣ. ಈ ಪೋಸ್ಟ್‌ಗೆ ಅವರು ಯಾರನ್ನೂ ಟ್ಯಾಗ್ ಮಾಡಿಲ್ಲ. ಆದರೆ ಸೋಷಿಯಲ್ ಮೀಡಿಯಾ ಮಂದಿ ಯಾರಿಗೆ ಹಾಕಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್ ಟ್ರೆಂಡಿಂಗ್ ಆಗಿದೆ.