ವಿಜಯ್ ದೇವರಕೊಂಡರಿಗೆ ಡಾರ್ಲಿಂಗ್ ಎಂದ ರಶ್ಮಿಕಾ ಮಂದಣ್ಣ

| Published : Mar 30 2024, 12:47 AM IST / Updated: Mar 30 2024, 12:48 AM IST

ಸಾರಾಂಶ

ಕಿರಿಕ್ ಸುಂದ್ರಿ ರಶ್ಮಿಕಾ ವಿಜಯ ದೇವರಕೊಂಡಗೆ ಡಾರ್ಲಿಂಗ್‌ ಅಂದ್ಬಿಡೋದಾ!

ಕನ್ನಡಪ್ರಭ ಸಿನಿವಾರ್ತೆ

ತೆಲುಗು ನಟ ವಿಜಯ ದೇವರಕೊಂಡ ಅವರನ್ನು ‘ಡಾರ್ಲಿಂಗ್‌’ ಎಂದು ಕರೆಯುವ ಮೂಲಕ ರಶ್ಮಿಕಾ ಮಂದಣ್ಣ ತಮ್ಮಿಬ್ಬರ ರಿಲೇಶನ್‌ಶಿಪ್‌ ಗಾಸಿಪ್‌ಗಳಿಗೆ ನೀರೆರೆದಿದ್ದಾರೆ. ರಶ್ಮಿಕಾ ಅವರ ಹೊಸ ಪೋಸ್ಟ್ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಸೃಷ್ಟಿ ಮಾಡಿದೆ.

ಸದ್ಯ ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿದೆ. ಇದನ್ನು ನೋಡಿ ರಶ್ಮಿಕಾ ಫುಲ್‌ ಎಕ್ಸೈಟ್‌ಮೆಂಟ್‌ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ. ಇದಕ್ಕೆ ವಿಜಯ ದೇವರಕೊಂಡ, ‘ಕ್ಯೂಟೆಸ್ಟ್’ ಎಂದು ಕಾಮೆಂಟ್‌ ಮಾಡುವ ಜೊತೆಗೆ ಹಾರ್ಟ್ ಇಮೋಜಿ ಸೇರಿಸಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.