‘ಐ ಆ್ಯಮ್‌ ಗಾಡ್‌’- ಇದು ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆ, ನಿರ್ದೇಶನದ ಹೊಸ ಸಿನಿಮಾ. ಸಂಪೂರ್ಣ ಎಐ ಮೂಲಕ ತಯಾರಾಗಿರುವ ಈ ಚಿತ್ರದ ನಿರ್ದೇಶನ, ನಿರ್ಮಾಣ ಸೇರಿದಂತೆ ಸರ್ವಸ್ವವನ್ನೂ ರವಿಚಂದ್ರನ್‌ ಅವರೇ ನಿಭಾಯಿಸಿರುವುದು ವಿಶೇಷ.

 ಸಿನಿವಾರ್ತೆ

‘ಐ ಆ್ಯಮ್‌ ಗಾಡ್‌’- ಇದು ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆ, ನಿರ್ದೇಶನದ ಹೊಸ ಸಿನಿಮಾ. ಸಂಪೂರ್ಣ ಎಐ ಮೂಲಕ ತಯಾರಾಗಿರುವ ಈ ಚಿತ್ರದ ನಿರ್ದೇಶನ, ನಿರ್ಮಾಣ ಸೇರಿದಂತೆ ಸರ್ವಸ್ವವನ್ನೂ ರವಿಚಂದ್ರನ್‌ ಅವರೇ ನಿಭಾಯಿಸಿರುವುದು ವಿಶೇಷ. ಕ್ಯಾಮರಾಮೆನ್‌ ಸಹಕಾರವನ್ನಷ್ಟೇ ಪಡೆಯಲಾಗಿದೆ.

ಸಿನಿಮಾ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ ರವಿಚಂದ್ರನ್‌

ಸಿನಿಮಾ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ ರವಿಚಂದ್ರನ್‌, ‘ಸಿನಿಮಾದಲ್ಲಿ 35 ಹಾಡುಗಳಿವೆ. ಹಾಡುಗಳೇ ಸಿನಿಮಾದ ಜೀವಾಳ. 400 ದಿನಗಳ ಕಾಲ ಈ ಸಿನಿಮಾ ಚಿತ್ರೀಕರಣ ಮಾಡಿದ್ದೇನೆ. ಸುಮಾರು ಎರಡೂವರೆ ವರ್ಷಗಳಿಂದ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ಕ್ಯಾಮರಾಮೆನ್‌ ಬಿಟ್ಟರೆ ಉಳಿದೆಲ್ಲವನ್ನೂ ನಾನೊಬ್ಬನೇ ನಿಭಾಯಿಸಿದ್ದೇನೆ. 

ಮೇ 30ರಂದು ಈ ಸಿನಿಮಾ ರಿಲೀಸ್‌

ನನ್ನ ಬರ್ತ್‌ಡೇ ದಿನ ಅಂದರೆ ಮೇ 30ರಂದು ಈ ಸಿನಿಮಾ ರಿಲೀಸ್‌ ಮಾಡುವ ಪ್ಲಾನ್‌ ಇದೆ’ ಎಂದಿದ್ದಾರೆ.