ರಿಷಬ್ ಶೆಟ್ಟಿಯವರ ‘ಕಾಂತಾರ ಚಾಪ್ಟರ್‌ 1’ ವಿಜಯ ಯಾತ್ರೆ ಮುಂದುವರಿದಿದ್ದು, ವಿಶ್ವಾದ್ಯಂತ 717.50 ಕೋಟಿ ರು.ಗೂ ಗಳಿಕೆ ಮಾಡಿದೆ. ಭಾರತದಲ್ಲಿ 500 ಕೋಟಿ ರು.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಈ ಗಳಿಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಸಿನಿವಾರ್ತೆ

ಈ ಬಾರಿ ವೀಕೆಂಡ್‌ ಹಾಗೂ ದೀಪಾವಳಿ ಹಬ್ಬ ಜೊತೆಯಾಗಿ ಬಂದಿದ್ದು ಸಿನಿಮಾ ಗಳಿಕೆಯನ್ನು ಶೀಘ್ರ 1000 ಕೋಟಿ ಹೊಸ್ತಿಲು ದಾಟಿಸುವ ನಿರೀಕ್ಷೆ ಇದೆ. ಸಿನಿಮಾ ಸಕ್ಸಸ್‌ ಓಟ ಇದೇ ರೀತಿ ಮುಂದುವರಿದರೆ ಇದು ‘ಕೆಜಿಎಫ್‌ 2’ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.