ರಿಚ್ಚಿ ಚಿತ್ರದಲ್ಲಿ ಮಾನ್ವಿತಾ ಕಾಮತ್

| Published : Dec 15 2023, 01:30 AM IST / Updated: Dec 15 2023, 01:31 AM IST

ಸಾರಾಂಶ

ನಟಿ ಮಾನ್ವಿತಾ ಕಾಮತ್‌ ಅವರು ಹೇಮಂತ್‌ ಕುಮಾರ್‌ ನಟಿಸಿ, ನಿರ್ದೇಶಿಸುತ್ತಿರುವ ‘ರಿಚ್ಚಿ’ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕುವ ಜತೆಗೆ ಒಂದಿಷ್ಟು ದೃಶ್ಯಗಳಲ್ಲಿ ನಟಿಸಲಿದ್ದಾರೆ. ಸೋನು ನಿಗಮ್‌ ಧ್ವನಿಯಲ್ಲಿ ಮೂಡಿ ಬಂದಿರುವ ‘ಸನಿಹ ನೀ ಇರುವಾಗ’ ಎಂದು ಸಾಗುವ ಹಾಡಿಗೆ ಮಾನ್ವಿತಾ ಕಾಮತ್‌ ಹೆಜ್ಜೆ ಹಾಕಲಿದ್ದಾರೆ.

ನಟಿ ಮಾನ್ವಿತಾ ಕಾಮತ್‌ ಅವರು ಹೇಮಂತ್‌ ಕುಮಾರ್‌ ನಟಿಸಿ, ನಿರ್ದೇಶಿಸುತ್ತಿರುವ ‘ರಿಚ್ಚಿ’ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕುವ ಜತೆಗೆ ಒಂದಿಷ್ಟು ದೃಶ್ಯಗಳಲ್ಲಿ ನಟಿಸಲಿದ್ದಾರೆ. ಸೋನು ನಿಗಮ್‌ ಧ್ವನಿಯಲ್ಲಿ ಮೂಡಿ ಬಂದಿರುವ ‘ಸನಿಹ ನೀ ಇರುವಾಗ’ ಎಂದು ಸಾಗುವ ಹಾಡಿಗೆ ಮಾನ್ವಿತಾ ಕಾಮತ್‌ ಹೆಜ್ಜೆ ಹಾಕಲಿದ್ದಾರೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ಅಗಸ್ತ್ಯ ಸಂಗೀತ ಸಂಯೋಜನೆ ಇರುವ ಚಿತ್ರವಿದು. ವೆಂಕಟಾಚಲಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಕೇಶ್‌ ರಾವ್‌ ಸಹ ನಿರ್ಮಾಣವಿದೆ. ಅಜಿತ್ ಕುಮಾರ್ ಕ್ಯಾಮೆರಾ ಚಿತ್ರಕ್ಕಿದೆ.