ರೋಜಿ ಚಿತ್ರದ ಕ್ರಿಸ್ಟೋಫರ್‌ ಪಾತ್ರದಲ್ಲಿ ಶ್ರೀನಗರ ಕಿಟ್ಟಿ

| Published : Dec 15 2023, 01:30 AM IST

ರೋಜಿ ಚಿತ್ರದ ಕ್ರಿಸ್ಟೋಫರ್‌ ಪಾತ್ರದಲ್ಲಿ ಶ್ರೀನಗರ ಕಿಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶೂನ್ಯ ನಿರ್ದೇಶಿಸಿ, ಲೂಸ್‌ಮಾದ ಯೋಗಿ ನಾಯಕನಾಗಿರುವ ‘ರೋಜಿ’ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಜತೆಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀನಗರ ಕಿಟ್ಟಿ ಅವರ ಕ್ರಿಸ್ಟೋಫರ್‌ ಪಾತ್ರದ 30 ಅಡಿಯ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಯಿತು.

ಕನ್ನಡಪ್ರಭ ಸಿನಿವಾರ್ತೆ

ಶೂನ್ಯ ನಿರ್ದೇಶಿಸಿ, ಲೂಸ್‌ಮಾದ ಯೋಗಿ ನಾಯಕನಾಗಿರುವ ‘ರೋಜಿ’ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಜತೆಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀನಗರ ಕಿಟ್ಟಿ ಅವರ ಕ್ರಿಸ್ಟೋಫರ್‌ ಪಾತ್ರದ 30 ಅಡಿಯ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಯಿತು. ಈ ಬಗ್ಗೆ ಮಾತನಾಡಿದ ಶ್ರೀನಗರ ಕಿಟ್ಟಿ, ‘ಹುಡುಗರು ಚಿತ್ರದ ನಂತರ ನಾನು ಮತ್ತು ಯೋಗಿ ಜತೆಯಾಗಿ ನಟಿಸುತ್ತಿರುವ ಚಿತ್ರವಿದು. ಚಿತ್ರದಲ್ಲಿನ ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಮತ್ತಷ್ಟು ಖುಷಿಯಾಗಿದೆ. ಕ್ರಿಸ್ಟೋಫರ್‌ ನನ್ನ ಪಾತ್ರದ ಹೆಸರು’ ಎಂದರು.

ಯೋಗಿ ಮಾತನಾಡಿ, ‘ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಕ್ರಿಸ್ಟೋಫರ್‌ ಪಾತ್ರ ತುಂಬಾ ಖಡಕ್‌ ಆಗಿರುತ್ತದೆ’ ಎಂದರು. ನಿರ್ದೇಶಕ ಶೂನ್ಯ, ನಿರ್ಮಾಪಕ ಡಿ ವೈ ರಾಜೇಶ್‌ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್‌ ಹಾಜರಿದ್ದರು.