ಸಂಯುಕ್ತ ಹೆಗ್ಡೆ ಬಾಲಿಯಲ್ಲಿ ಸೋಲೋ ಟ್ರಿಪ್‌ ಖುಷಿಯಲ್ಲಿದ್ದಾರೆ.

 ಸಿನಿವಾರ್ತೆ

ಬಾಲಿ ಟೂರ್‌ನಲ್ಲಿರುವ ಕಿರಿಕ್‌ ಹುಡುಗಿ ಸಂಯುಕ್ತಾ ಹೆಗ್ಡೆ ತನ್ನ ಹೊಸ ಸಾಹಸಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

ಬಾಲಿಯಲ್ಲಿ ಸುಮಾರು ತಿಂಗಳ ಟ್ರಿಪ್‌ ಮಾಡಲಿರುವ ನಟಿ ಅಲ್ಲಿ ಯೋಗದ ಹೊಸ ಹೊಸ ಪಟ್ಟುಗಳನ್ನು ಕಲಿತಿದ್ದಾರೆ. ‘ನಮ್ಮ ಸಂಸ್ಕೃತಿಯ ಭಾಗವಾಗಿರೋ ಯೋಗವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಆದರೆ ದೇಹ, ಮನಸ್ಸು, ಆತ್ಮವನ್ನು ಬೆಸೆಯುವ ಶಕ್ತಿಶಾಲಿ ವಿದ್ಯೆಯಿದು’ ಅಂತ ಯೋಗವನ್ನು ಕೊಂಡಾಡಿದ್ದಾರೆ.

ಉಳಿದಂತೆ ಬಾಲಿಯ ಹೊಲ ಗದ್ದೆಗಳಲ್ಲಿ, ಬೀಚ್‌ಗಳಲ್ಲಿ, ಜೀವನೋತ್ಸಾಹ ಹೆಚ್ಚಿಸುವ ಸ್ವಿಮ್ಮಿಂಗ್‌ ಫೂಲ್‌ಗಳಲ್ಲಿ ನಟಿ ಹಾಲಿಡೇ ಎನ್‌ಜಾಯ್‌ ಮಾಡುತ್ತಿದ್ದಾರೆ.