ಸಾರಾಂಶ
ಗೌರಿ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಸಾನ್ಯಾ ಅಯ್ಯರ್
ಕನ್ನಡಪ್ರಭ ಸಿನಿವಾರ್ತೆ
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಅವರ ಪುತ್ರ ಸಮರಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ‘ಗೌರಿ’ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಚಿತ್ರತಂಡ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ತನ್ನ ಭಾಗದ ಡಬ್ಬಿಂಗ್ ಪೂರ್ಣಗೊಂಡಿದೆ ಎಂದು ಸಾನ್ಯಾ ಅಯ್ಯರ್ ತಿಳಿಸಿದ್ದಾರೆ. ಜೊತೆಗೆ ‘ಈ ಬಾರಿ ಗೌರಿ ಹಬ್ಬ ಇನ್ನೂ ಬೇಗ ಬರಲಿ’ ಎನ್ನುವ ಮೂಲಕ ಸಿನಿಮಾ ಶೀಘ್ರ ಬಿಡುಗಡೆಯಾಗಲಿ ಎಂದು ಆಶಿಸಿದ್ದಾರೆ.