ಸಾರಾಂಶ
ಮುಂಬೈ: ತಮ್ಮ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ಡೀಪ್‌ಫೇಕ್ ದೃಶ್ಯಗಳನ್ನೂ ಸೃಷ್ಟಿ ಮಾಡಲಾಗಿದೆ. ಈ ರೀತಿ ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನನ್ನ ಹೆಸರಲ್ಲಿ ನಕಲಿ ಟ್ವೀಟರ್ ಖಾತೆ: ಸಚಿನ್ ಪುತ್ರಿ ಕಿಡಿ
ಮುಂಬೈ: ತಮ್ಮ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ಡೀಪ್‌ಫೇಕ್ ದೃಶ್ಯಗಳನ್ನೂ ಸೃಷ್ಟಿ ಮಾಡಲಾಗಿದೆ. ಈ ರೀತಿ ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಇತ್ತೀಚೆಗೆ ಸಾರಾ ಅವರು ಕ್ರಿಕೆಟಿಗ ಶುಭಮನ್ ಗಿಲ್ ಜತೆಗೆ ಇರುವಂತೆ ಬಿಂಬಿಸುವ ಫೋಟೋ ಡೀಪ್‌ಫೇಕ್ ಫೋಟೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಸಾರಾ ಈ ಹೇಳಿಕೆ ಬಂದಿದೆ.ಈ ಕುರಿತು ತಮ್ಮ ಇನಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಅವರು, ‘ನನ್ನ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆ ಸೃಷ್ಟಿಸಲಾಗಿದೆ. ಆದರೆ ನಾನು ಯಾವುದೇ ಟ್ವೀಟರ್ ಖಾತೆ ಹೊಂದಿಲ್ಲ. ಆದ್ದರಿಂದ ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅದರಲ್ಲಿ ಡೀಪ್‌ಫೇಕ್ ಸೇರಿದಂತೆ ಅನೈತಿಕ ಸಂದೇಶಗಳನ್ನು ಪ್ರಸರಣ ಮಾಡಲಾಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.ಆದರೆ ಪೋಸ್ಟ್ ಹಾಕಿದ ಕೆಲ ಸಮಯದಲ್ಲೇ ತಮ್ಮ ಪೋಸ್ಟ್‌ನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.