ಸ್ಕ್ಯಾಮ್‌ 1770 ಚಿತ್ರದ ಟ್ರೇಲರ್‌ ಬಿಡುಗಡೆ

| Published : Mar 31 2024, 02:04 AM IST

ಸ್ಕ್ಯಾಮ್‌ 1770 ಚಿತ್ರದ ಟ್ರೇಲರ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ ಸ್ಕ್ಯಾಮ್ 1770 ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರದಲ್ಲಿ ದಡ್ಡ ಪ್ರವೀಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಂಜನ್‌ ನಾಯಕನಾಗಿ ನಟಿಸಿರುವ ‘ಸ್ಕ್ಯಾಮ್‌ 1770’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ದೇವರಾಜ್‌ ಆರ್‌ ಈ ಚಿತ್ರವನ್ನು ನಿರ್ಮಿಸಿದ್ದು, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ. ವಿದ್ಯಾರ್ಥಿ ಆದರ್ಶ್ ಟ್ರೇಲರ್ ಬಿಡುಗಡೆ ಮಾಡಿದರು.

ನಿರ್ದೇಶಕ ವಿಕಾಸ್‌ ಪುಷ್ಪಗಿರಿ ಮಾತನಾಡಿ, ‘ಶಿಕ್ಷಣದ ಸ್ಕ್ಯಾಮ್‌ಗಳ ಕುರಿತಾದ ಚಿತ್ರವಿದು. ವಿದ್ಯೆಯೇ ಇಂದು ವ್ಯಾಪಾರ ಆಗಿದೆ. ಈ ವ್ಯಾಪಾರ ಏನೆಲ್ಲ ಸ್ಕ್ಯಾಮ್‌ಗಳನ್ನು ಮಾಡುತ್ತಿದೆ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಏಪ್ರಿಲ್‌ 12 ರಂದು ಚಿತ್ರ ತೆರೆಗೆ ಬರಲಿದೆ’ ಎಂದರು. ನಟ ರಂಜನ್‌ ಮಾತನಾಡಿ, ‘ಈ ಚಿತ್ರದಲ್ಲಿ ನಾನು ಜಾಣನ ಪಾತ್ರ ಮಾಡಿದ್ದೇನೆ’ ಎಂದರು.

ಚಿತ್ರದ ನಾಯಕಿ ನಿಶ್ಚಿತ, ಹರಿಣಿ, ನಾರಾಯಣಸ್ವಾಮಿ, ನಟನ ಪ್ರಶಾಂತ್, ರಾಘು ಶಿವಮೊಗ್ಗ, ಸಂಗೀತ ನಿರ್ದೇಶಕ ಸತೀಶ್‌ ಆರ್ಯನ್‌, ಚಿತ್ರಕಥೆ ಬರೆದಿರುವ ಶಂಕರ್ ರಾಮನ್‌ ಹಾಜರಿದ್ದರು.