ಸಾರಾಂಶ
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರನ್ನು ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಯಶ್ ಬೆಳವಣಿಗೆಯನ್ನು ಕೊಂಡಾಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರನ್ನು ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಯಶ್ ಬೆಳವಣಿಗೆಯನ್ನು ಕೊಂಡಾಡಿದ್ದಾರೆ.‘ಟಾಕ್ಸಿಕ್ ಅನ್ನೋದರಲ್ಲೇ ಒಂದು ನಶೆ, ಕಿಕ್ ಇದೆ. ನಾವೂ ಈ ಸಿನಿಮಾಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ. ಟಾಕ್ಸಿಕ್ ಅದ್ಭುತವಾಗಿ ತಯಾರಾಗುತ್ತಿರುವುದು ಹೆಮ್ಮೆ. ನಮ್ಮ ಕರ್ನಾಟಕದವರು ದೇಶದ ತುಂಬಾ ಮೆರೆಯುತ್ತಾರೆ ಅಂದರೆ ಅದು ನಾವೇ ಮೆರೆದಂತೆ. ನನ್ನ ಮತ್ತೊಬ್ಬ ಸಹೋದರನ ಥರ ಯಶ್. ನಾನು, ಅಪ್ಪು, ಯಶ್ ಕೊನೆ ಕಾರ್ಯಕ್ರಮದಲ್ಲಿ ಜೊತೆಯಲ್ಲಿದ್ದೆವು. ನನಗೆ ಯಶ್ ಬೇರೆ ಅಲ್ಲ, ಅಪ್ಪು ಬೇರೆ ಅಲ್ಲ. ಯಶ್ ಈ ರೀತಿ ಬೆಳೆಯುತ್ತಿರುವುದು ನನ್ನ ತಮ್ಮನೇ ಬೆಳೆಯುತ್ತಿರುವಂತೆ ಅನಿಸುತ್ತದೆ’ ಎಂದು ಅವರು ಹೇಳಿದ್ದಾರೆ.