ಸಾರಾಂಶ
ಚೀನಾದ ಹಾಂಗ್‌ಕಾಂಗ್ ನಗರದಲ್ಲಿ ಪ್ರಸಿದ್ಧ ‘ಪಿಜ್ಜಾ ಹಟ್’ ಸಂಸ್ಥೆಯು ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಮಾರಾಟ ಮಾಡುತ್ತಿದೆ
ಚೀನಾದಲ್ಲಿ ಹಾವನ್ನೂ ಸೇರಿ ಅದೇನೇನೋ ಪ್ರಾಣಿ ಪಕ್ಷಿಗಳನ್ನು ತಿನ್ನುತ್ತಾರೆ ಎಂಬುದು ಗೊತ್ತು. ಆದರೆ ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಸೇವಿಸಿದ್ದನ್ನು ನೋಡಿದ್ದೀರಾ? ಹೌದು. ಚೀನಾದ ಹಾಂಗ್‌ಕಾಂಗ್ ನಗರದಲ್ಲಿ ಪ್ರಸಿದ್ಧ ‘ಪಿಜ್ಜಾ ಹಟ್’ ಸಂಸ್ಥೆಯು ಹಾವಿನ ಮಾಂಸದಿಂದ ಪಿಜ್ಜಾ ತಯಾರಿಸಿ ಮಾರಾಟ ಮಾಡುತ್ತಿದೆ. ಅಲ್ಲದೇ ‘ಹಾಂಗ್ ಸೂಪ್’ ಎಂಬ ಹಾವಿನ ಸೂಪ್ ಅನ್ನು ತಯಾರಿಸಿ ಇದರೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಹಾವಿನ ಮಾಂಸದ ಪಿಜ್ಜಾ ಮತ್ತು ಸೂಪ್‌ಗೆ ಅಲ್ಲಿ ಭಾರೀ ಬೇಡಿಕೆ ಇದ್ದು, ಇದು ಜನರಿಂದ ಹೆಚ್ಚು ಮೆಚ್ಚುಗೆ ಗಳಿಸಿದೆಯಂತೆ.