ಇನ್ನೂ ಮುಗಿದಿಲ್ಲ ಮ್ಯಾಕ್ಸ್ ಶೂಟಿಂಗ್

| Published : Apr 02 2024, 01:03 AM IST / Updated: Apr 02 2024, 06:55 AM IST

Kiccha Sudeep BJP
ಇನ್ನೂ ಮುಗಿದಿಲ್ಲ ಮ್ಯಾಕ್ಸ್ ಶೂಟಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಸದ್ಯಕ್ಕೆ ಬಿಡುಗಡೆ ಇಲ್ಲ.

 ಸಿನಿವಾರ್ತೆ :  ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಶೀಘ್ರ ಬಿಡುಗಡೆಯಾಗಬಹುದಾದ ಸಿನಿಮಾ ಯಾವುದು ಎಂದು ನೋಡಿದರೆ ಮನಸ್ಸಿಗೆ ಬರುವ ಮೊದಲ ಹೆಸರು ‘ಮ್ಯಾಕ್ಸ್’.

ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಸದ್ಯಕ್ಕಂತೂ ಬಿಡುಗಡೆ ಆಗುವ ಲಕ್ಷಣಗಳಿಲ್ಲ. ಯಾಕೆಂದರೆ ಚಿತ್ರೀಕರಣ ನಡೆಯುತ್ತಲೇ ಇದೆ. ಇನ್ನೂ 15-20 ದಿನಗಳ ಶೂಟಿಂಗ್ ಬಾಕಿ ಇದೆ ಎನ್ನಲಾಗುತ್ತಿದೆ. ಆದರೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬವಾಗಲಿದೆ ಎನ್ನುತ್ತವೆ ಮೂಲಗಳು. ಬಹಳ ದಿನಗಳ ಬಳಿಕ ಸುದೀಪ್ ಅ‍ವರನ್ನು ಹೊಸ ರೂಪದಲ್ಲಿ ನೋಡಬಹುದು ಎಂದು ಆಪ್ತ ಮೂಲಗಳು ತಿಳಿಸಿವೆ. ಸದ್ಯಕ್ಕೆ ಸುದೀಪ್ ಮಹಾಬಲಿಪುರಂನಲ್ಲಿರುವ ಮ್ಯಾಕ್ಸ್ ಶೂಟಿಂಗ್ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.