ವಾರ ಫಲ

| Published : Dec 17 2023, 01:45 AM IST / Updated: Dec 17 2023, 01:46 AM IST

ಸಾರಾಂಶ

ಈ ವಾರ ವಿವಿಧ ರಾಶಿಗಳ ಗೋಚಾರ ಫಲ. ಮೇಷ, ವೃಷಭ ಸೇರಿ ಹನ್ನೆರಡು ರಾಶಿಗಳ ಭವಿಷ್ಯ.

-

(17-12-23 ರಿಂದ 23-12-23)

ಮೇಷರಾಶಿಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೀರಿ ಹಾಗೂ ಅದರಲ್ಲಿ ಯಶಸ್ಸನ್ನೂ ಗಳಿಸುತ್ತೀರಿ.‌ ಈ ವಾರ ನಿಮಗೆ ಮಿಶ್ರ ಫಲ. ಗುರುಬಲ ಇಲ್ಲ. ಹೀಗಾಗಿ ಅಂದುಕೊಂಡ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತವೆ.‌ ಹಣದ ಹರಿವು ಉತ್ತಮವಾಗಿದೆ.‌ ಇತರರ ಬಗ್ಗೆ ಬಹಳ ಬೇಗ ಜಡ್ಜ್‌ಮೆಂಟಲ್ ಆಗಬೇಡಿ. ಸಾವಿನ ಬಗೆಗಿನ ಯೋಚನೆಗಳು ಬರಬಹುದು. ಆದರೆ ಮೋಡದ ಹಾಗೆ ಬಂದು ಹೋಗುವ ಆಲೋಚನೆಗಳಷ್ಟೇ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೆತ್ತವರನ್ನು ಜತನದಿಂದ ನೋಡಿಕೊಳ್ಳಿ. ಸಂಕುಚಿತ ಯೋಚನೆ ಬೇಡ.ವೃಷಭರಾಶಿ: ನಿಮ್ಮ ಬಗ್ಗೆ ಇತರರು ವಿಷ ಕಾರುವುದನ್ನು ನೋಡಿ ಒಳಗೊಳಗೇ ಸಿಡಿದು ನಿಲ್ಲಬಹುದು. ಆದರೆ ಇಂಥಾ ಸನ್ನಿವೇಶಗಳನ್ನು ಚಾಕಚಕ್ಯತೆಯಿಂದ ನಿಭಾಯಿಸೋದು ನಿಮಗೆ ಕರತಲಾಮಲಕ. ಈ ಬಗ್ಗೆ ಹೆಚ್ಚು ಯೋಚಿಸಬೇಡಿ. ಇವೆಲ್ಲ ಬೇಗ ಪರಿಹಾರವಾಗುತ್ತವೆ. ಸ್ವಭಾವತಃ ನೀವು‌ ಮೃದು ಹೃದಯಿಗಳು. ಸಹಿಸುವ ಗುಣ ಉಳ್ಳವರು. ಹಾಗೂ ಆಶಾವಾದಿಗಳು. ಹೀಗಾಗಿ ನೀವು ಕಷ್ಟಕ್ಕೆ ಹೆದರುವವರಲ್ಲ. ಮುಂದೆ ಧನ ಲಾಭ ಯಶಸ್ಸು ಸಿಗುತ್ತದೆ. ಈಗ ಸ್ವಲ್ಪ ಒತ್ತಡಗಳು, ಹಣದ ಖರ್ಚು ಇರುತ್ತದೆ. ಮುಂದೆ ಒಳ್ಳೆಯ ದಿನಗಳು ಬರುತ್ತದೆ.ಮಿಥುನ ರಾಶಿಗೊಂದಲಗಳಿಂದ ಹೊರ ಬನ್ನಿ. ಆಗ ಜೀವನ ನಿಚ್ಚಳವಾಗಿ ಕಾಣುತ್ತದೆ. ನಿಮ್ಮ ಎಷ್ಟೋ ಸಮಸ್ಯೆಗಳು ಈ ನಿರ್ಧಾರ ತೆಗೆದುಕೊಳ್ಳಲಾಗದ ಕಾರಣಕ್ಕೆ ಬರುತ್ತವೆ. ಕೆಲವು ಕ್ಷುಲಕ ಅನಿಸೋ ಯೋಚನೆಗಳನ್ನು ಅತಿಯಾಗಿ ಯೋಚಿಸಿ ತಲೆಗೆ ಹಚ್ಚಿಕೊಳ್ಳುತ್ತೀರಿ. ಹಾಗಾಗಿ ಬದುಕಿನಲ್ಲಿ ಏಟು ತಿನ್ನುತ್ತೀರಿ. ಆದರೆ ಸದ್ಯ ನಿಮಗೆ ಗುರುಬಲ ಇರುವುದರಿಂದ ಎಲ್ಲ ಕೆಲಸಗಳೂ ಸಲೀಸಾಗಿ ನಡೆಯುತ್ತದೆ. ಶುಕ್ರ ಐದನೇ ಮನೆಯಲ್ಲಿ ಇರುವುದೂ ಶುಭಫಲ ನೀಡುತ್ತದೆ.‌ಆರರಲ್ಲಿ ಕುಜ ಬಹಳ ಧೈರ್ಯ ಪರಾಕ್ರಮ ಕೊಡುತ್ತಾನೆ. ಹೀಗಾಗಿ ಚಿಂತಿಸುವ ಅಗತ್ಯವಿಲ್ಲ. ಕಟಕರಾಶಿ: ಮನಸ್ಸು ಆನಂದವಾಗಿದ್ದಾಗ ಆನಂದಿಸಿ. ಅದರ ಬದಲು ಮುಂದೆ ಕಷ್ಟ ಬರಬಹುದು ಅಂತ ಚಿಂತಿಸಿ ಈಗಲೇ ತಲೆಕೆಡಿಸಿಕೊಂಡರೆ ಈಗಿನ ಖುಷಿಗೂ ಕಲ್ಲು ಬೀಳುತ್ತದೆ. ಹೀಗಾಗಿ ಸಣ್ಣ ಖುಷಿಗಳನ್ನು ಆನಂದಿಸಲು ಕಲಿಯಿರಿ. ಅಷ್ಟಮಶನಿಯ ಪ್ರಭಾವದಿಂದ ಈಗ ಏಳು ಬೀಳುಗಳು ಸಾಮಾನ್ಯ. ಇದು ನಿಮ್ಮನ್ನು ಹಿಂಡಿ‌ಹಿಪ್ಪೆ ಮಾಡಬಹುದು. ಅನಾರೋಗ್ಯ, ಬಿದ್ದು ಕೈಕಾಲಿಗೆ ಏಟು ಮಾಡಿಕೊಳ್ಳುವುದು ಇತ್ಯಾದಿ ಸಂಭವಿಸಬಹುದು. ಆದರೆ ಮಾನಸಿಕವಾಗಿ ಭಾವುಕರಾದರೂ ನೀವು ಸಮಸ್ಯೆಯಿಂದ ಓಡಿಹೋಗುವವರಲ್ಲ. ಹೀಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂದೆ ಹೋಗುತ್ತಿರಿ.ಸಿಂಹರಾಶಿನೀವು ಸ್ವಭಾವತಃ ಹಠಮಾರಿಗಳು. ನೀವು ಹೇಳಿದ್ದೇ ನಡೆಯಬೇಕು. ಈ ಮನೋಭಾವದಿಂದ ಹೊರಬನ್ನಿ. ಎಲ್ಲರ ಹಾಗೇ ನಾನೂ ಒಬ್ಬ ಸಾಮಾನ್ಯ ಅಂದುಕೊಳ್ಳಿ. ಆಗ ಬದುಕು ಚೆನ್ನಾಗಿರುತ್ತದೆ. ಕುಟುಂಬ ಸದಸ್ಯರೊಡನೆ ವಾಗ್ವಾದ ಬೇಡ.‌ ಮನೆಯ ಶಾಂತಿಯನ್ನು ಕಾಯ್ದುಕೊಳ್ಳಿ. ನಿಮ್ಮ ಗ್ರಹಗತಿಗಳು ಈಗ ಶುಭ ಸ್ಥಾನದಲ್ಲಿ ಇದ್ದು ಸಾಮಾಜಿಕ ಮರ್ಯಾದೆ ಗೌರವ ಯಶಸ್ಸು ಎಲ್ಲವೂ ಸಿಗುವಂತೆ ಮಾಡುತ್ತದೆ. ‌ಧನಲಾಭ ಇದೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.‌ ಹೆಸರು, ಪ್ರಸಿದ್ಧಿಗಾಗಿ ಅತಿಯಾಗಿ ಶ್ರಮ ಪಡುವುದು ಬೇಡ. ಕನ್ಯಾರಾಶಿನೀವು ನಾಯಕತ್ವದ ಗುಣವುಳ್ಳವರು.‌ ಧೈರ್ಯ ಸಾಹಸಗಳು ನಿಮ್ಮಲ್ಲಿ ಹೆಚ್ಚಾಗಿವೆ. ಜೊತೆಗೆ ನಿಮ್ಮ ಮಾತನ್ನು ಎಲ್ಲರೂ ಪಾಲಿಸಬೇಕೆಂದು ಬಯಸುತ್ತೀರಿ.‌ ನಿಮ್ಮ ಅನುಯಾಯಿಗಳನ್ನು ನಿಮ್ಮ ಜೊತೆ ಮುಂದೆ ಕರೆದುಕೊಂಡು ಹೋಗುವ ಗುಣ ನಿಮ್ಮಲ್ಲಿದೆ. ಇದೇ ನಿಮ್ಮ ಪ್ಲಸ್ ಪಾಯಿಂಟ್. ನಿಮ್ಮ ಕೈಕೆಳಗೆ ಇರುವವರ ಹಿತ ಕಾಯುತ್ತೀರಿ. ಇದು ನಿಮ್ಮನ್ನು ಕಾಪಾಡುತ್ತದೆ. ಜೊತೆಗೆ ಶನಿಬಲದಿಂದ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗುತ್ತದೆ. ಹಣ ಸಿಕ್ಕಿದೆ ಎಂದು ಬೇಕಾಬಿಟ್ಟಿ ಖರ್ಚು ಮಾಡಬೇಡಿ. ಆಲಸ್ಯತನದಿಂದ ಹೊರಬನ್ನಿ. ತುಲಾರಾಶಿನನ್ನ ಮಾತೇ ಮಾತು ನಡೆಯಬೇಕೆನ್ನುವ ಸ್ವಭಾವದವರು‌ ನೀವು. ಮಾತಿನಲ್ಲಿ ದರ್ಪ ಇರುತ್ತದೆ. ಇತರರನ್ನು ನಿಮಗಿಂತ ಕಡಿಮೆಯವರು ಅಂತ ತಿಳಿಯುವುದೆ ನಿಮಗೆ ಹಿನ್ನಡೆಯಾಗಬಹುದು. ಆದರೆ ಸದ್ಯ ನಿಮಗೆ ಗುರುಬಲವಿದೆ. ರಾಹುವೂ ನಿಮ್ಮ ಪರವಿದ್ದಾನೆ. ಅಂದುಕೊಂಡ ಕೆಲಸ ಕಾರ್ಯ ಪೂರ್ಣವಾಗುತ್ತದೆ. ಜೊತೆಗೆ ರಾಹುಕೃಪೆಯಿಂದ ಅಡ್ಡಿಗಳು ನಿವಾರಣೆಯಾಗುತ್ತವೆ. ಯಾವುದೇ ಘಟನೆಗೂ ವಿಪರೀತಾರ್ಥ ಕಲ್ಪಿಸದೆ ಸರಳವಾಗಿ ವ್ಯವಹರಿಸಿ. ಇದರಿಂದ ನಿಮಗೆ ಮುಂದೆ ಬರಲು ಸಹಾಯ ಆಗುತ್ತದೆ. ಅಹಂಕಾರ ಬೇಡ. ವೃಶ್ಚಿಕರಾಶಿ: ಸೂಕ್ಷ್ಮವಾಗಿ ಆಲೋಚಿಸುತ್ತೀರಿ. ಆದರೆ ನಿಮ್ಮ ಕೆಲವೊಂದು ನಡೆ ನುಡಿಗಳು ಅಸೂಕ್ಷ್ಮವಾಗಿರುತ್ತವೆ. ಇದು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಬಹುದು. ಸದ್ಯ ಸಮಯ ಅಷ್ಟು ಚೆನ್ನಾಗಿಲ್ಲ. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಸ್ವಲ್ಪ ಕಾಲ ಸಹನೆ ವಹಿಸಬೇಕು. ಕುಟುಂಬದಿಂದ ದೂರ ಇರುವುದು, ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವುದು, ನೌಕರಿಯಲ್ಲಿ ಒತ್ತಡ ಇಂಥ ಸಮಸ್ಯೆಗಳು ಇರುತ್ತದೆ. ‌ಪುಣ್ಯಕ್ಕೆ ಹಣದ ಹರಿವು ಉತ್ತಮವಾಗಿದೆ. ಸಣ್ಣ ಪುಟ್ಟ ನಿರ್ಧಾರಕ್ಕೂ ಗೊಂದಲ ಉಂಟಾಗಬಹುದು. ಮನಃಶಾಂತಿ ಕಂಡುಕೊಳ್ಳುವತ್ತ ಯೋಚಿಸಿ. ಧನಸ್ಸುರಾಶಿ: ನೇರ ಮಾತು ನಿಮ್ಮ ಗುಣ. ಆದರೆ ಎಲ್ಲ ಕಾಲಕ್ಕೂ ಇದು ಸಲ್ಲುತ್ತದೆ ಎಂಬ ಅಹಂ ಬೇಡ. ಕಾಲ, ಸಂದರ್ಭಕ್ಕೆ ತಕ್ಕಂತೆ ಮಾತು, ನಡೆ ನುಡಿ ಬದಲಿಸಿಕೊಳ್ಳಿ. ಇಲ್ಲವಾದರೆ ಸಮಸ್ಯೆಯೊಳಗೆ ಬೀಳುತ್ತೀರಿ. ಇದೀಗ ನೀವು ಸಾಧನೆ ಮಾಡುವ ಕಾಲ. ಈ ಸಮಯ ನಿಮ್ಮ ಕೆಲವು ನಡೆ ನುಡಿಗಳು ನಿಮಗೆ ಅಡ್ಡಿಯಾಗದಿರಲಿ. ಎತ್ತರಕ್ಕೆ ಬೆಳೆಯಲು ಅವಕಾಶ ಇದೆ. ಗುರಿ ಸಾಧಿಸಲು ಇದು ಸುಸಮಯ. ಸಹನೆ, ತಾಳ್ಮೆಯೂ ಈ ಕ್ಷಣದ ಅಗತ್ಯ. ಇತರರ ಬಗ್ಗೆ ವೃಥಾ ಆರೋಪ ಮಾಡದಿರಿ. ಮಕರ ರಾಶಿ: ಮನೆ ನಿರ್ವಹಣಾ ಕೆಲಸಗಳು ಸ್ಥಗಿತಗೊಂಡಿದ್ದರೆ ಅದನ್ನು ಪೂರ್ಣಗೊಳಿಸಲು ಮುಂದಿನ ವಾರ ಸರಿಯಾದ ಸಮಯ. ಆರೋಗ್ಯ ಸಮಸ್ಯೆಗಳು ಸುಧಾರಿಸಲಿವೆ. ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಲು ಆಧುನಿಕ ಜ್ಞಾನ ಅಗತ್ಯ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಅವಕಾಶಗಳು ಮತ್ತು ಹಣ ಎರಡೂ ಹರಿದು ಬರುವ ಕಾಲ. ನೀವು ಯಾರಿಗೂ ಕೈಯೊಡ್ಡದವರು. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದು ಮಾಡೇ ಮಾಡುತ್ತೀರ. ನಿಮಗೆ ಈಗ ಒಳ್ಳೆಯ ದಿನಗಳು ಪ್ರಾರಂಭವಾಗಿದೆ. ಅವಕಾಶಗಳು ನಿಮ್ಮ ಬಳಿ ಬರುತ್ತದೆ. ಪದವಿ‌ ಅಧಿಕಾರ ಸಿಗುತ್ತದೆ. ಕುಂಭರಾಶಿ: ವಿದ್ಯಾರ್ಥಿಗಳು ಮತ್ತು ಯುವಕರು ವೃತ್ತಿಪರ ಅಧ್ಯಯನದಲ್ಲಿ ಸರಿಯಾದ ಯಶಸ್ಸನ್ನು ಪಡೆಯಬಹುದು. ಮುಂದಿನ ವಾರ ಹಣದ ವಹಿವಾಟು ಮಾಡಲು ಸಮಯ ಸರಿಯಲ್ಲ. ಯಾರೊಂದಿಗಾದರೂ ಸಂವಹನ ನಡೆಸುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ. ಮಹಿಳೆಯರು ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ನೀವಂದುಕೊಂಡ ಸಂಗತಿಗಳೆಲ್ಲವೂ ನಿಮ್ಮ ವಿರುದ್ಧವಾಗಿ‌ ಎದ್ದು ನಿಲ್ಲಬಹುದು. ಈಗ ನೀವು ತಾಳ್ಮೆ ವಹಿಸಿದಷ್ಟೂ ಒಳ್ಳೆಯದು. ಒಳ್ಳೆಯ ಕಾಲ ಬರುತ್ತದೆ. ನಿಮ್ಮ ವಿರುದ್ಧ ಧ್ವನಿ‌ ಎತ್ತಿದವರು ಅವರಷ್ಟಕ್ಕೆ ಸುಮ್ಮನಾಗುತ್ತಾರೆ. ಮೀನರಾಶಿ: ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ರೀತಿಯ ಇತ್ಯರ್ಥವನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಮುಂದಿನ ವಾರ ವ್ಯವಹಾರದಲ್ಲಿ ಸವಾಲಿನ ಪರಿಸ್ಥಿತಿ ಇರಲಿದೆ. ಪತಿ ಮತ್ತು ಪತ್ನಿ ಪರಸ್ಪರ ಸಹಕಾರದ ಭಾವನೆಯನ್ನು ಹೊಂದಿರುತ್ತಾರೆ. ನೀವು ಕಷ್ಟಗಳನ್ನು ಎದುರಿಸಿ ನಿಲ್ಲುತ್ತೀರಿ. ಜನಾನುರಾಗಿಯಾಗಿ ಇರುತ್ತೀರಿ.‌ ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ. ಸದ್ಯಕ್ಕೆ ಇದೇ ನಿಮ್ಮ‌ಅಸ್ತ್ರ. ಎಂತಹ ಸಂದರ್ಭವನ್ನೂ ನಿಮ್ಮದಾಗಿ ಮಾಡಿಕೊಳ್ಳುವ ಕಲೆ ನಿಮಗೆ ಇದೆ.