ಸಾರಾಂಶ
ಸಲ್ಮಾನ್ ಖಾನ್ ನಟನೆಯ ‘ಟೈಗರ್-3’ ಚಿತ್ರ ಬಿಡುಗಡೆಯಾದ 8 ದಿನದಲ್ಲಿ 376 ಕೋಟಿ ರು.ಗಳಿಸಿದೆ. ಈ ಪೈಕಿ ಭಾರತದಲ್ಲಿ 280 ಕೋಟಿ ರು. ವಿದೇಶಗಳಲ್ಲಿ 96 ಕೋಟಿ ರು.ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ
ಮುಂಬೈ: ಸಲ್ಮಾನ್ ಖಾನ್ ನಟನೆಯ ‘ಟೈಗರ್-3’ ಚಿತ್ರ ಬಿಡುಗಡೆಯಾದ 8 ದಿನದಲ್ಲಿ 376 ಕೋಟಿ ರು.ಗಳಿಸಿದೆ. ಈ ಪೈಕಿ ಭಾರತದಲ್ಲಿ 280 ಕೋಟಿ ರು. ವಿದೇಶಗಳಲ್ಲಿ 96 ಕೋಟಿ ರು.ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ 94 ಕೋಟಿ ರು. ಸಂಪಾದನೆ ಮಾಡಿತ್ತು. ನಂತರ ಮೂರನೇ ದಿನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ ಚಿತ್ರ 240 ಕೋಟಿ ರು. ಗಳಿಕೆ ಕಂಡಿತ್ತು. ‘ಟೈಗರ್-3’ ಚಿತ್ರ 2017ರಲ್ಲಿ ಬಿಡುಗಡೆಯಾದ ಟೈಗರ್ ಜಿಂದಾ ಹೈ ಚಿತ್ರದ ಮುಂದುವರೆದ ಭಾಗವಾಗಿದೆ.