ಮುಳ್ಳುಹಂದಿ ನುಂಗಲು ಹೋಗಿ ಹುಲಿ ಸಾವು!

| Published : Oct 26 2023, 01:00 AM IST / Updated: Oct 26 2023, 01:01 AM IST

ಸಾರಾಂಶ

ಹುಲಿ-ಸಿಂಹಗಳ ಕಾದಾಟದಲ್ಲಿ ಹುಲಿಯು ಸಿಂಹವನ್ನು ಸೋಲಿಸಿತು ಎಂಬ ಕತೆ ಓದಿದ್ದೇವೆ. ಆದರೆ ಮುಳ್ಳುಹಂದಿಯೊಂದು ಹುಲಿಯ ಸಾವಿಗೆ ಕಾರಣವಾದ ಅಪರೂಪದ ಘಟನೆ ತಮಿಳುನಾಡಿನ ಅಮರಾವತಿ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಈ ದಾಳಿಯಲ್ಲಿ ಮುಳ್ಳುಹಂದಿ ಕೂಡ ಅಸುನೀಗಿದೆ.
ತಮಿಳುನಾಡಿನ ಅಮರಾವತಿ ಅಭಯಾರಣ್ಯದಲ್ಲಿ ಅಪರೂಪದ ಘಟನೆ ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹುಲಿ ಆಗ ಗಂಟಲಲ್ಲಿ ಮುಳ್ಳು ಸಿಲುಕಿ ಸಾವು ಮರಣೋತ್ತರ ಪರೀಕ್ಷೆಯಲ್ಲಿ ವಿಷಯ ಬೆಳಕಿಗೆ ಕೊಯಮತ್ತೂರು: ಹುಲಿ-ಸಿಂಹಗಳ ಕಾದಾಟದಲ್ಲಿ ಹುಲಿಯು ಸಿಂಹವನ್ನು ಸೋಲಿಸಿತು ಎಂಬ ಕತೆ ಓದಿದ್ದೇವೆ. ಆದರೆ ಮುಳ್ಳುಹಂದಿಯೊಂದು ಹುಲಿಯ ಸಾವಿಗೆ ಕಾರಣವಾದ ಅಪರೂಪದ ಘಟನೆ ತಮಿಳುನಾಡಿನ ಅಮರಾವತಿ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಈ ದಾಳಿಯಲ್ಲಿ ಮುಳ್ಳುಹಂದಿ ಕೂಡ ಅಸುನೀಗಿದೆ. ತಿರುಪ್ಪುರ ಅರಣ್ಯ ವಲಯದ ಅಮರಾವತಿ ಅರಣ್ಯದಲ್ ಕಳುದಕತ್ತಿ ತೊರೆಯ ಬಳಿ ಹುಲಿಯ ಶವವೊಂದು ಇತ್ತೀಚೆಗೆ ಪತ್ತೆಯಾಗಿತ್ತು. ಈಗ ಹುಲಿಯ ಮರಣೋತ್ತರ ಪರೀಕ್ಷೆ ನಡೆದಿದ್ದು, ಮುಳ್ಳುಹಂದಿಯ ಜತೆಗಿನ ಕಾದಾಟದಲ್ಲಿ ಆದ ಗಾಯದಿಂದ ಹುಲಿಯು ಮೃತಪಟ್ಟಿದೆ ಎಂದು ಬಯಲಾಗಿದೆ. ಹುಲಿಯ ಶವವನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೊತ್ತರ ಪರೀಕ್ಷೆ ನಡೆಸಲಾಗಿದೆ. ಇದರ ಪ್ರಾಥಮಿಕ ವರದಿಯಲ್ಲಿ, ‘ಗಂಡು ಹುಲಿಗೆ ಸುಮಾರು 9 ವರ್ಷ ವಯಸ್ಸಾಗಿದೆ. ಮುಳ್ಳುಹಂದಿಯ ಹೊತೆಗಿನ ಹುಲಿ ಕಾಳಗ ನಡೆಸಿದೆ. ಆಗ ಹುಲಿಯ ಕಾಲು ಮತ್ತು ಮಂಡಿಗೆ ಗಾಯಗಳಾಗಿವೆ. ಈ ವೇಳೆ ಮುಳ್ಳುಹಂದಿಯನ್ನು ತಿನ್ನಲು ಹುಲಿ ಯತ್ನಿಸಿದೆ. ಆಗ ಅದರ ಗಂಟಲಲ್ಲಿ ಮುಳ್ಳುಹಂದಿಯ ಮುಳ್ಳು ಸಿಕ್ಕಿವೆ’ ಎಂದು ತಿಳಿಸಲಾಗಿದೆ. ಇದಾದ ನಂತರ ಗಾಯಗೊಂಡ ಹುಲಿ ಅಲ್ಲಿಯೇ ಬಿದ್ದಿದ್ದು, 3 ದಿನದಿಂದ ಯಾವುದೇ ಆಹಾರ ತಿಂದಿಲ್ಲ. ಏಕೆಂದರೆ ಗಾಯಾಳು ಹುಲಿಗೆ ಆಹಾರ ತಿನ್ನಲು ಆಗದು. ಹೀಗಾಗಿ ಹುಲಿಯ ಹೊಟ್ಟೆ ಸಂಪೂರ್ಣ ಖಾಲಿ ಆಗಿದ್ದು ಪತ್ತೆಯಾಗಿದೆ. ಅರಣ್ಯದಲ್ಲಿ ಸಿಬ್ಬಂದಿಯು ಗಸ್ತು ಸುತ್ತುವಾಗ ಈ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ದಹನ ಮಾಡಲಾಯಿತು. ಹುಲಿಯ ದೇಹಗಳಿಂದ ಹಲವು ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಅವುಗಳನ್ನು ಹೆಚ್ಚಿನ ತನಿಖೆಗೆ 3 ವಿವಿಧ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಕಳಿಸಲು ನಿರ್ಧರಿಸಲಾಗಿದೆ.