ಸಾರಾಂಶ
ರಾಜ್ ಬಿ ಶೆಟ್ಟಿ ಕಥೆ ಬರೆದು ನಟಿಸಿರುವ ಟೋಬಿ ಸಿನಿಮಾ ಇದೀಗ ಸೋನಿ ಲೈವ್ ಓಟಿಟಿಯಲ್ಲಿ ಡಿ.22 ರಿಂದ ಪ್ರಸಾರವಾಗಲಿದೆ.
ಕನ್ನಡಪ್ರಭ ಸಿನಿವಾರ್ತೆ
ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾ ಸೋನಿ ಲೈವ್ ಓಟಿಟಿಯಲ್ಲಿ ಡಿ.22ರಿಂದ ಪ್ರಸಾರವಾಗಲಿದೆ. ಸೋನಿ ಲೈವ್ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಕನ್ನಡ ಚಿತ್ರವಿದು. ಚೈತ್ರಾ ಜೆ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಭರತ್ ಜಿ.ಬಿ ನಟಿಸಿದ್ದಾರೆ.ರಾಜ್ ಬಿ ಶೆಟ್ಟಿ ಕಥೆ, ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನವಿರುವ ಈ ಸಿನಿಮಾಗೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣವಿದೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ.