ದರ್ಶನ್ ನಟನೆಯ ಕಾಟೇರ ಇಂದು ಅದ್ದೂರಿ ಬಿಡುಗಡೆ

| Published : Dec 30 2023, 01:15 AM IST

ಸಾರಾಂಶ

ಇಂದು ಎಲ್ಲೆಡೆ ಕಾಟೇರ ಅಬ್ಬರ. ಈ ಸಿನಿಮಾ ಹೈಲೈಟ್ಸ್ ಇಲ್ಲಿವೆ.

- ಕಾಟೇರ 1974ರ ಕಾಲಘಟ್ಟದ ನೈಜ ಕಥೆ ಆಧರಿಸಿ ನಿರ್ಮಿಸಲಾಗಿರುವ ಸಿನಿಮಾ. ದೇವರಾಜ್ ಅರಸು ಕಾಲದಲ್ಲಿ ರಾಜ್ಯದಲ್ಲಿ ‘ಭೂಸುಧಾರಣಾ ಕಾಯ್ದೆ’ಯ ಅನ್ವಯ ‘ಉಳುವವನೇ ಹೊಲದೊಡೆಯ’ ಕಾನೂನು ಜಾರಿಯಾದ ಬಳಿಕದ ಸ್ಥಿತ್ಯಂತರದ ಚಿತ್ರಣ ಸಿನಿಮಾದಲ್ಲಿ ಸಿಗುತ್ತದೆ.- ವಯಸ್ಸಾದಾಗ ದರ್ಶನ್‌ ಹೇಗೆ ಕಾಣ್ತಾರೆ ಅನ್ನೋದನ್ನಿಲ್ಲಿ ನೋಡಬಹುದು. ಕಾಟೇರಮ್ಮ ದರ್ಶನ್‌ ಅವರ ಮನೆ ದೇವರು. ಆಕೆ ಗ್ರಾಮದೇವತೆ. ಚಿತ್ರದಲ್ಲಿ ಆಕೆಯ ಭಂಟ ಕಾಟೇರನಾಗಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. - ಗ್ರಾಮೀಣ ಸಂಸ್ಕೃತಿಯನ್ನು ಕಮರ್ಷಿಯಲ್‌ ಟಚ್‌ ಕೊಟ್ಟು ನಿರೂಪಿಸಲಾಗಿದೆ. ಗ್ರಾಮ್ಯ ಭಾಷೆಯನ್ನೇ ಬಳಸಲಾಗಿದ್ದು, ದರ್ಶನ್‌ ಈ ಭಾಷೆಯಲ್ಲಿ ತರಬೇತಿ ಪಡೆದ ಬಳಿಕ ಧ್ವನಿ ನೀಡಿದ್ದಾರೆ. - ಜಗಪತಿ ಬಾಬು, ವಿನೋದ್‌ ಆಳ್ವ, ಕುಮಾರ್‌ ಗೋವಿಂದ್‌, ಪದ್ಮಾವಾಸಂತಿ, ಶ್ರುತಿ, ವೈಜನಾಥ ಬಿರಾದಾರ್ ಮೊದಲಾದ ಹಿರಿಯ ಕಲಾವಿದರ ಗಡಣವೇ ಚಿತ್ರದಲ್ಲಿದೆ. - ಈ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದು ಆಕೆಯ ನಟನೆ, ಡಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೋಟ್‌ಪ್ಯಾನ್‌ ಇಂಡಿಯಾ ಸಿನಿಮಾ ಮಾಡೋದಕ್ಕೆ ಸಾಕಷ್ಟು ಸಮಯ, ಪರಿಶ್ರಮ ತಾಳ್ಮೆ ಬೇಕು. ಅಷ್ಟೆಲ್ಲ ಸಹನೆ ನನಗಿಲ್ಲ. ವರ್ಷಕ್ಕೆ ಎರಡು ಒಳ್ಳೆಯ ಕನ್ನಡ ಸಿನಿಮಾ ಮಾಡಬೇಕು ಎನ್ನುವುದು ನನ್ನ ಇಂಗಿತ.- ದರ್ಶನ್‌