ಇಂದು ಪುನೀತ್‌ ರಾಜ್‌ಕುಮಾರ್‌ ಅವರ 50ನೇ ಹುಟ್ಟುಹಬ್ಬ- ರಾಜ್ಯಾದ್ಯಾಂತ ಅಪ್ಪು ಅಭಿಮಾನಿಗಳಿಂದ ಸಂಭ್ರಮ

| N/A | Published : Mar 17 2025, 07:07 AM IST

Puneeth Rajkumar
ಇಂದು ಪುನೀತ್‌ ರಾಜ್‌ಕುಮಾರ್‌ ಅವರ 50ನೇ ಹುಟ್ಟುಹಬ್ಬ- ರಾಜ್ಯಾದ್ಯಾಂತ ಅಪ್ಪು ಅಭಿಮಾನಿಗಳಿಂದ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು (ಮಾ.17) ಕರ್ನಾಟಕ ರತ್ನ ಡಾ ಪುನೀತ್‌ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ. ಅಪ್ಪು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕನ್ನಡ ಸಂಘ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

ಸಿನಿವಾರ್ತೆ

ಇಂದು (ಮಾ.17) ಕರ್ನಾಟಕ ರತ್ನ ಡಾ ಪುನೀತ್‌ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ. ಅಪ್ಪು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕನ್ನಡ ಸಂಘ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

ಬೆಂಗಳೂರಿನ ಕಂಠೀರವಸ್ಟುಡಿಯೋದಲ್ಲಿ ಪುನೀತ್‌ ಅವರ ಸಮಾಧಿಗೆ ರಾಜ್‌ ಕುಟುಂಬದವರಿಂದ ಬೆಳಗ್ಗೆ ಎಂದಿನಂತೆ ಪೂಜೆ ನಡೆಯಲಿದೆ. ಇನ್ನೂ ಕಂಠೀರವ ಸ್ಟುಡಿಯೋಗೆ ಪವರ್‌ ಸ್ಟಾರ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಅಭಿಮಾನಿಗಳ ಸಂಘದಿಂದ ಸಿಹಿ ವಿತರಣೆ ಹಾಗೂ ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈಗಾಗಲೇ ಪುನೀತ್‌ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ನಟನೆಯ ಮೊದಲ ಚಿತ್ರ ‘ಅಪ್ಪು’ ಮರು ಬಿಡುಗಡೆ ಆಗಿದೆ. ಕಳೆದ ಶುಕ್ರವಾರವೇ ರಾಜ್ಯಾದ್ಯಾಂತ ಅದ್ದೂರಿಯಾಗಿ ಬಿಡುಗಡೆ ಆಗಿರುವ ‘ಅಪ್ಪು’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಂದ ಬೆಂಬಲ ಸಿಗುತ್ತಿದೆ. ಈ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಬೇರೆ ಯಾವ ಚಿತ್ರವೂ ಬಿಡುಗಡೆ ಆಗಿಲ್ಲ. ಅಭಿಮಾನಿಗಳು ‘ಅಪ್ಪು’ ಚಿತ್ರದ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ.