ಸಾರಾಂಶ
ಕನ್ನಡ ಚಿತ್ರರಂಗದ ಪ್ರತಿಷ್ಠಾತ್ಮಕ ಕೆಸಿಸಿ ಕ್ರಿಕೆಟ್ ಪಂದ್ಯಾಟಕ್ಕೆ ಇಂದು ಚಾಲನೆ
ಕನ್ನಡಪ್ರಭ ಸಿನಿವಾರ್ತೆ
ಇಂದಿನಿಂದ ಮೂರು ದಿನಗಳ ಕಾಲ ಸುದೀಪ್ ಸಾರಥ್ಯದಲ್ಲಿ ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿಗೆ ಅದ್ದೂರಿ ಚಾಲನೆ ದೊರೆಯಲಿದೆ. ಶಿವರಾಜ್ ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ, ಗಣೇಶ್, ಉಪೇಂದ್ರ ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಇವರ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ, ಎಸ್. ಬದರೀನಾಥ್ ಮುರುಳಿ ವಿಜಯ್, ರಾಬಿನ್ ಉತ್ತಪ್ಪ ಜೊತೆಗೆ ಹರ್ಷಲ್ ಗಿಬ್ಸ್ ಮತ್ತು ತಿಲಕರತ್ನ ದಿಲ್ಶಾನ್ ಅವರು ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ. ಬೆಳ್ಳಿತೆರೆ ಹಾಗೂ ಕಿರುತೆರೆಯ ಅನೇಕ ಕಲಾವಿದರು ಕೆಸಿಸಿಯ ಭಾಗವಾಗಲಿದ್ದಾರೆ.ಈ ಬಾರಿ ಗಂಗ ವಾರಿಯರ್ಸ್, ಹೋಯ್ಸಳ ಈಗಲ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ಒಡೆಯರ್ ಚಾರ್ಜರ್ಸ್, ವಿಜಯನಗರ ಪಾಟ್ರೈಟ್ ಮತ್ತು ಕದಂಬ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
;Resize=(128,128))
;Resize=(128,128))
;Resize=(128,128))
;Resize=(128,128))