ಯಶ್‌ 8ರ ನಂಟು ಜಗತ್ಪ್ರಸಿದ್ಧ. ಇದೀಗ ಟಾಕ್ಸಿಕ್ ಶೂಟಿಂಗ್‌ ಕೂಡ ಆಗಸ್ಟ್ 8 ಕ್ಕೆ ಶುರುವಾಗ್ತಿದೆ.

 ಸಿನಿವಾರ್ತೆ

ಯಶ್ ನಟನೆಯ ‘ಟಾಕ್ಸಿಕ್‌’ ಸಿನಿಮಾಗೆ ಆಗಸ್ಟ್‌ 8ರಿಂದ ಬೆಂಗಳೂರಿನಲ್ಲಿ ಶೂಟಿಂಗ್‌ ಆರಂಭವಾಗಲಿದೆ. ಈ ಮೂಲಕ ಹೊಸ ಸಿನಿಮಾದಲ್ಲಿಯೂ ಯಶ್ ಎಂಟರ ನಂಟು ಮುಂದುವರಿದಿದೆ.

ಜನವರಿ 8ರಂದು ಹುಟ್ಟಿರುವ ಯಶ್‌ಗೆ 8 ಅದೃಷ್ಟ ಸಂಖ್ಯೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 8ನೇ ತಿಂಗಳ 8ನೇ ತಾರೀಕಿಗೆ ಶೂಟಿಂಗ್‌ ಆರಂಭಿಸಲು ಚಿತ್ರತಂಡ ಮುಂದಾಗಿದೆ. ಈ ಹಿಂದೆ ಡಿಸೆಂಬರ್‌ 8ರಂದೇ ‘ಟಾಕ್ಸಿಕ್‌’ ಸಿನಿಮಾ ಘೋಷಣೆಯಾಗಿತ್ತು. ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಸಿನಿಮಾ ಗೋವಾದ ಡ್ರಗ್ಸ್‌ ಮಾಫಿಯಾ ಬಗೆಗಿನ ಕಥೆ ಹೊಂದಿದೆ.