ಸಾರಾಂಶ
ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ಚಿತ್ರದ ಟೀಸರ್ ಜನವರಿ ತಿಂಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ತನ್ನ ಅಭಿಮಾನಿಗಳಿಗೆ ಟೀಸರ್ ಬಿಡುಗಡೆ ದಿನಾಂಕ ಗೆಸ್ ಮಾಡು ತಿಳಿಸಿದ್ದಾರೆ. ಉತ್ತರ ಗೆಸ್ ಮಾಡಿ ಇಮೇಲ್ ಕಳುಹಿಸುವವರಿಗೆ ಚಿತ್ರತಂಡ ಕಾರ್ಯಕ್ರಮದ ಟಿಕೆಟ್ ನೀಡಲಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ 50 ಅದೃಷ್ಟಶಾಲಿಗಳಿಗೆ ಬಹುಮಾನ ದೊರೆಯಲಿದೆ.
ಕನ್ನಡಪ್ರಭ ಸಿನಿವಾರ್ತೆ
ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ಚಿತ್ರದ ಟೀಸರ್ ಜನವರಿ ತಿಂಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ತನ್ನ ಅಭಿಮಾನಿಗಳಿಗೆ ಟೀಸರ್ ಬಿಡುಗಡೆ ದಿನಾಂಕ ಗೆಸ್ ಮಾಡು ತಿಳಿಸಿದ್ದಾರೆ. ಉತ್ತರ ಗೆಸ್ ಮಾಡಿ ಇಮೇಲ್ ಕಳುಹಿಸುವವರಿಗೆ ಚಿತ್ರತಂಡ ಕಾರ್ಯಕ್ರಮದ ಟಿಕೆಟ್ ನೀಡಲಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ 50 ಅದೃಷ್ಟಶಾಲಿಗಳಿಗೆ ಬಹುಮಾನ ದೊರೆಯಲಿದೆ.ಚಿತ್ರದ ಟೀಸರ್ ಲಾಂಚ್ ಈವೆಂಟ್ ದಿನಾಂಕವನ್ನು ಗೆಸ್ ಮಾಡಿ contest@uithemovie.com ಇಲ್ಲಿಗೆ ಈ-ಮೇಲ್ ಮಾಡಬೇಕು. ಈಗಾಗಲೇ 8 ಸಾವಿರ ಇಮೇಲ್‌ಗಳು ಬಂದಿದ್ದು, ಈ ಪೈಕಿ 50 ಲಕ್ಕಿ ವಿಜೇತರನ್ನು ನಟ ಉಪೇಂದ್ರ ಅವರೇ ಆಯ್ಕೆ ಮಾಡಲಿದ್ದಾರೆ.
ಈ ಕುರಿತು ಒಂದು ವಿಡಿಯೋವನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆ ವಿಡಿಯೋದಲ್ಲಿ ದಿನಾಂಕದ ಕ್ಲೂ ಇದೆ ಎನ್ನಲಾಗಿದೆ. ಜಿ ಮನೋಹರನ್ ನಿರ್ಮಾಣದ ಸಿನಿಮಾ ಇದು.