ಸಾರಾಂಶ
ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ರಾಷ್ಟ್ರೀಯ ಕ್ರಶ್ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರ ಸಂಬಂಧದ ಬಗ್ಗೆ ಹಲವು ತಿಂಗಳಿಂದ ಹರಿದಾಡುತ್ತಿರುವ ಗುಸುಗುಸು ಈಗ ನಿಜವಾಗಿದ್ದು, ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿ
ಹೈದ್ರಾಬಾದ್: ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ರಾಷ್ಟ್ರೀಯ ಕ್ರಶ್ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರ ಸಂಬಂಧದ ಬಗ್ಗೆ ಹಲವು ತಿಂಗಳಿಂದ ಹರಿದಾಡುತ್ತಿರುವ ಗುಸುಗುಸು ಈಗ ನಿಜವಾಗಿದ್ದು, ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಖಾಸಗಿ ಸಮಾರಂಭ ಏರ್ಪಡಿಸಿ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಪ್ರೀತಿಗೆ ಇಬ್ಬರೂ ಶುಕ್ರವಾರ ಅಧಿಕೃತ ಮುದ್ರೆ ಒತ್ತಿದ್ದಾರೆ ಎನ್ನಲಾಗಿದೆ.
ಇವರಿಬ್ಬರು 2026ರ ಫೆಬ್ರವರಿಯಲ್ಲಿ ಹಸೆಗೇರಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನಿಶ್ಚಿತಾರ್ಥ ಅಥವಾ ಮದುವೆ ದಿನಾಂಕ ನಿಶ್ಚಯದ ಬಗ್ಗೆ ರಶ್ಮಿಕಾ ಅಥವಾ ವಿಜಯ್ ಅಧಿಕೃತವಾಗಿ ಘೋಷಿಸಿಲ್ಲ.