ಕಾಂತಾರ 1 ಹೊಗಳಿದ ಯಶ್‌, ಅನಿಮಲ್‌ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ

| N/A | Published : Oct 04 2025, 10:34 AM IST

Yash on Kantara 1
ಕಾಂತಾರ 1 ಹೊಗಳಿದ ಯಶ್‌, ಅನಿಮಲ್‌ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಯಾವ ಸಿನಿಮಾವನ್ನೂ ಸುಲಭಕ್ಕೆ ಮೆಚ್ಚಿಕೊಂಡು ಟ್ವೀಟ್‌ ಮಾಡದ ಯಶ್‌ ಕೂಡ ಮೆಚ್ಚಿದ್ದಾರೆ. ಅನಿಮಲ್‌ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಹೊಗಳಿದ್ದಾರೆ.

ಸಂದೀಪ್‌ ರೆಡ್ಡಿ ವಂಗಾ, ‘ಕಾಂತಾರ ಚಾಪ್ಟರ್‌ 1 ಮಾಸ್ಟರ್‌ಪೀಸ್‌. ಭಾರತೀಯ ಚಿತ್ರರಂಗ ಹಿಂದೆಂದೂ ಈ ಥರದ ಸಿನಿಮಾ ನೋಡಿರಲಿಲ್ಲ. ಅದ್ಭುತ ಸಿನಿಮ್ಯಾಟಿಕ್‌ ಅನುಭವ ನೀಡಿದ ನೈಜ ದೈವಿಕ ಸಿನಿಮಾ. ರಿಷಬ್‌ ಶೆಟ್ಟಿ ಅವರ ಒನ್‌ ಮ್ಯಾನ್‌ ಶೋ. ಪ್ರತಿಯೊಂದನ್ನೂ ಅದ್ಭುತವಾಗಿ ನಿಭಾಯಿಸಿದ ಅವರಿಗೆ ನಮಸ್ಕಾರ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಅದ್ಭುತ’ ಎಂದಿದ್ದಾರೆ.

ಭಾರತೀಯ ಚಿತ್ರರಂಗದ ಗಣ್ಯರಾದ ನಿವಿನ್‌ ಪೌಲಿ, ಲಕ್ಷ್ಮೀ ಮಂಚು, ಜೋಗಿ ಪ್ರೇಮ್‌, ಉಪೇಂದ್ರ, ರಾಧಿಕಾ ಪಂಡಿತ್‌ ಸೇರಿದಂತೆ ಹಲವರು ‘ಕಾಂತಾರ 1’ ಸಿನಿಮಾ ನೋಡಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ಕೃತಜ್ಞತೆ ಸಲ್ಲಿಸಿದ ರಿಷಬ್‌ ಶೆಟ್ಟಿ

ಯಶ್‌ ಪ್ರಶಂಸೆಗೆ ಕೃತಜ್ಞತೆ ಸಲ್ಲಿಸಿದ ರಿಷಬ್‌ ಶೆಟ್ಟಿ, ‘ನಿಮ್ಮ ಸಿನಿಮಾ ಜರ್ನಿ ಮತ್ತು ವಿಷನ್‌ ಎಂದೆಂದೂ ನಮಗೆಲ್ಲ ಸ್ಫೂರ್ತಿ. ನಿಮ್ಮ ಸಾಧನೆಯನ್ನು ಕಂಡು ನಾವೆಲ್ಲ ಹೆಮ್ಮೆ ಪಡುತ್ತೇವೆ. ಯಾವತ್ತೂ ನನ್ನ ಜೊತೆ ನಿಂತು ನನ್ನ ಕೆಲಸವನ್ನು ಬೆಂಬಲಿಸುವ ನಿಮಗೆ ಕೃತಜ್ಞತೆ’ ಎಂದಿದ್ದಾರೆ.

Read more Articles on