ಸಾರಾಂಶ
ಕೊಡಗು ಮೂಲದ ಯಶಸ್ವಿನಿ ನಾಚಪ್ಪ ಇದೀಗ ‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿದ್ದಾರೆ.
ಕೊಡಗು ಮೂಲದ ಯಶಸ್ವಿನಿ ನಾಚಪ್ಪ ಇದೀಗ ‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿದ್ದಾರೆ. ಅಶ್ವಿನಿ ಈ ಹಿಂದೆ ಗಣೇಶ್ ನಟನೆಯ ‘ಮುಗುಳುನಗೆ’ ಚಿತ್ರಕ್ಕೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅನೇಕ ಚಿತ್ರಗಳಲ್ಲಿ ಡೈರೆಕ್ಷನ್ ಟೀಮ್‌ನಲ್ಲಿ ಕೆಲಸ ಮಾಡಿದ ಅನುಭವ ಇರುವ ಅಶ್ವಿನಿ ಡಬ್ಬಿಂಗ್ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದರು. ಮೂಲತಃ ರಂಗಭೂಮಿ ಹಿನ್ನೆಲೆಯವರು. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದವರು. ‘ಟಗರು ಪಲ್ಯ’ ಚಿತ್ರದ ನಾಯಕಿ ಅಮೃತಾ ಪ್ರೇಮ್, ಪದವಿ ಪೂರ್ವ ಚಿತ್ರದ ಪೃಥ್ವಿ ಶ್ಯಾಮನೂರ್, ಅಂಜಲಿ, ಯಶಾ ಶಿವಕುಮಾರ್ ಮೊದಲಾದವರಿಗೆ ನಟನೆಯ ತರಬೇತಿ ನೀಡಿದ್ದರು. ಸಂತೋಷ್ ಬಾಗಲಕೋಟಿ ಈ ಚಿತ್ರದ ನಿರ್ದೇಶಕರು. ವಿವೇಕ ಚಕ್ರವರ್ತಿ ಸಂಗೀತ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನವಿದೆ.
;Resize=(128,128))
;Resize=(128,128))
;Resize=(128,128))
;Resize=(128,128))