ಬೋಟ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

| Published : Dec 19 2023, 01:45 AM IST

ಸಾರಾಂಶ

ತಮಿಳು ನಟ ಯೋಗಿ ಬಾಬು ನಟನೆಯ ಬೋಟ್ ಚಿತ್ರದ ಕನ್ನಡ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್.

ಕನ್ನಡಪ್ರಭ ಸಿನಿವಾರ್ತೆತಮಿಳಿನ ಖ್ಯಾತ ನಟ ಯೋಗಿ ಬಾಬು ನಟನೆಯ ‘ಬೋಟ್’ ಸಿನಿಮಾದ ಕನ್ನಡ ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಯೋಗಿ ಬಾಬು ನಾಯಕರಾಗಿ ನಟಿಸುತ್ತಿದ್ದಾರೆ. ಪುಲಿ ಸಿನಿಮಾ ಖ್ಯಾತಿಯ ಚಿಂಬು ದೇವನ್ ನಿರ್ದೇಶನ ಮಾಡಿರುವ ಈ ಸಿನಿಮಾ ಸಂಪೂರ್ಣ ಸಮುದ್ರದಲ್ಲಿಯೆ ನಡೆಯುವುದು ವಿಶೇಷ.ಬಾಂಬ್ ದಾಳಿ ಆದಾಗ ಬೋಟ್ ಹತ್ತಿ ತಪ್ಪಿಸಿಕೊಂಡು ಹೋಗುವ ಮಂದಿಯ ಕಥೆ ಇದಾಗಿದೆ. ಪ್ರಭಾ ಪ್ರೇಮಕುಮಾರ್ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ.