ಯುವರಾಜ್‌ ಕುಮಾರ್‌ ನಟನೆಯ ‘ಎಕ್ಕ’ ಚಿತ್ರವು ಜುಲೈ 18ಕ್ಕೆ ತೆರೆಗೆ ಬರಲಿದೆ. ಚಿತ್ರತಂಡ ಈಗಷ್ಟೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.

ಸಿನಿವಾರ್ತೆ

ಯುವರಾಜ್‌ ಕುಮಾರ್‌ ನಟನೆಯ ‘ಎಕ್ಕ’ ಚಿತ್ರವು ಜುಲೈ 18ಕ್ಕೆ ತೆರೆಗೆ ಬರಲಿದೆ. ಚಿತ್ರತಂಡ ಈಗಷ್ಟೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಈಗಾಗಲೇ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿದೆ. 

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್‌ ಹಾಗೂ ಜಯಣ್ಣ ಫಿಲಮ್ಸ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿಕ್ರಂ ಹತ್ವಾರ್‌ ಕತೆ ಬರೆದಿದ್ದು, ರೋಹಿತ್‌ ಪದಕಿ ನಿರ್ದೇಶಿಸಿದ್ದಾರೆ. ಸಂಜನಾ ಆನಂದ್‌ ಹಾಗೂ ಸಂಪದಾ ಚಿತ್ರದ ನಾಯಕಿಯರು. ಅತುಲ್‌ ಕುಲಕರ್ಣಿ, ಆದಿತ್ಯ ಸೇರಿದಂತೆ ದೊಡ್ಡ ತಾರಗಣವೇ ಚಿತ್ರದಲ್ಲಿದೆ. ಚರಣ್‌ ರಾಜ್‌ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.