ಸಾರಾಂಶ
ಶಿಶು ಮರಣ ದರ ಇಳಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಶ್ರಮ ಹಾಗೂ ಪ್ರಗತಿ ‘ಮಾದರಿ’ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ.
‘ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತದಡಿ ಪ್ರತಿ ಕುಟುಂಬಕ್ಕೆ 4.7 ಲಕ್ಷ ರು. ಮೊತ್ತದ ವಿಮೆ ಒದಗಿಸಲಾಗುತ್ತಿದೆ. ಈ ಮೂಲಕ ಆರೋಗ್ಯ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಿರುವ ಭಾರತವು ಲಕ್ಷಾಂತರ ಜೀವಗಳನ್ನು ಉಳಿಸಿದೆ 2000ದಿಂದೀಚೆಗೆ 5 ವರ್ಷಕ್ಕಿಂತ ಚಿಕ್ಕ ಮಕ್ಕಳ ಮರಣದರದಲ್ಲಿ ಶೇ.70ರಷ್ಟು ಮತ್ತು ನವಜಾತ ಶಿಶುಗಳ ಮರಣದರದಲ್ಲಿ ಶೇ.61ರಷ್ಟು ಇಳಿಕೆಯಾಗಿದೆ. ಆರೋಗ್ಯ ಸೌಲಭ್ಯಗಳ ವ್ಯಾಪ್ತಿ ಹೆಚ್ಚಳ, ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಯ ಮೂಲಕ ಇದನ್ನು ಸಾಧಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.