ಸಾರಾಂಶ
‘ಕೇರಳವು ಮಿನಿ ಪಾಕಿಸ್ತಾನ ಇದ್ದಂತೆ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅಲ್ಲಿ ಗೆದ್ದದ್ದು’ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೊಸ ವಿವಾದ ಸೃಷ್ಟಿಸಿದ್ದಾರೆ.
ಮುಂಬೈ: ‘ಕೇರಳವು ಮಿನಿ ಪಾಕಿಸ್ತಾನ ಇದ್ದಂತೆ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅಲ್ಲಿ ಗೆದ್ದದ್ದು’ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೊಸ ವಿವಾದ ಸೃಷ್ಟಿಸಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣೆ, ‘ಕೇವಲ ಉಗ್ರಗಾಮಿಗಳಷ್ಟೇ ಪ್ರಿಯಾಂಕಾರ ಪರ ಮತ ಚಲಾಯಿಸಿದ್ದಾರೆ. ಹೀಗಾಗಿ ಅವರನ್ನು ಸಂದರನ್ನಾಗಿಸಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.ಅವರ ಈ ಹೇಳಿಕೆಗೆ ಮಹಾರಾಷ್ಟ್ರ ವಿಪಕ್ಷಗಳು ಕಿಡಿಕಾರಿವೆ.
ವಿವಾದದ ಬಳಿಕ ಸ್ಪಷ್ಟನೆ:ಕೇರಳವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಣೆ, ‘ನಾನು ಹೇಳಿದ್ದು ಕೇರಳವು ಪಾಕ್ ಇದ್ದಂತೆ ಎಂದಲ್ಲ. ಅಲ್ಲಿನ ಕೆಲವು ವಿದ್ಯಮಾನಗಳು ಪಾಕಿಸ್ತಾನದಂತೆ ನಡೆಯುತ್ತಿವೆ’ ಎಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕೇರಳವು ಭಾರತದ ಭಾಗವೇ ಆಗಿದೆ. ಆದರೆ ಇಲ್ಲಿ ಹಿಂದೂಗಳ ಸಂಖ್ಯೆ ಕುಸಿತ ಆತಂಕಕಾರಿ. ಹಿಂದೂಗಳನ್ನು ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಕೇರಳದ ಸ್ಥಿತಿಯನ್ನು ಪಾಕ್‌ನೊಂದಿಗೆ ಹೋಲಿಸಿದೆ. ಅಲ್ಲಿಯೂ ಹಿಂದೂಗಳನ್ನು ಹೀಗೆಯೇ ನಡೆಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.ರಾಣೆ ಭಾಷಣಕ್ಕೂ ಮುನ್ನ, ಅವರು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಪೊಲೀಸರು ಕಾರ್ಯಕ್ರಮದ ಆಯೋಜಕರಿಗೆ ಸೂಚಿಸಿದ್ದರು ಎಂದೂ ತಿಳಿದುಬಂದಿದೆ.
ರಾಣೆ ಭಾಷಣಕ್ಕೂ ಮುನ್ನ, ಅವರು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಪೊಲೀಸರು ಕಾರ್ಯಕ್ರಮದ ಆಯೋಜಕರಿಗೆ ಸೂಚಿಸಿದ್ದರು ಎಂದೂ ತಿಳಿದುಬಂದಿದೆ.ಜಡ್ಜ್‌ಗಳ ಕುಟುಂಬಸ್ಥರಿಗೆ ಜಡ್ಜ್ ಹುದ್ದೆ ಇಲ್ಲ?
ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಈಗಾಗಲೇ ಅಥವಾ ಹಿಂದೆ ನ್ಯಾಯಾಧೀಶರಾಗಿರುವವರ ಕುಟುಂಬದವರನ್ನು ಮತ್ತೆ ಹೈಕೋರ್ಟ್ ಜಡ್ಜ್ ಆಗಿ ನೇಮಕ ಮಾಡಬಾರದು ಎಂಬ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶೀಘ್ರ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಕುಟುಂಬ ಹಿನ್ನೆಲೆಯವರನ್ನು ಬಿಟ್ಟು ಮೊದಲ ಸಲ ನ್ಯಾಯಾಧೀಶ ಆದವರು, ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮಣೆ ಹಾಕಲಿದೆ. ಕುಟುಂಬ ಹಿನ್ನೆಲೆಯಿರುವವರ ಶಿಫಾರಸನ್ನು ನಿಲ್ಲಿಸಲಿದೆ. ಇದರಿಂದಾಗಿ ಹೊಸ ಆಲೋಚನೆಗಳು ಮತ್ತು ಚಿಂತನೆಗಳಿಗೆ ತಲೆ ಎತ್ತಲಿದೆ ಎಂಬ ಆಲೋಚನೆ ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸಂಜೀವ್ ಖನ್ನಾ ಅವರ ನೇತೃತ್ವದ ಕೊಲಿಜಿಯಂನದ್ದಾಗಿದೆ ಎಂದು ಮೂಲಗಳು ಹೇಳಿವೆ.
ಆದರೆ ಮತ್ತೊಂದೆಡೆ, ಕುಟುಂಬದಲ್ಲಿ ಜಡ್ಜ್ ಹಿನ್ನೆಲೆಯಿದ್ದರೂ ಅವರು ನ್ಯಾಯಾಧೀಶರ ಹುದ್ದೆಗೆ ಅರ್ಹರಾಗಿದ್ದೆ ಹಾಗೂ ಅಂಥವರ ನೇಮಕವಾಗದಿದ್ದರೆ, ಅದು ನ್ಯಾಯಾಂಗಕ್ಕೆ ನಷ್ಟವಾಗಲಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.2015ರಲ್ಲಿ ಕೇಂದ್ರ ಸರ್ಕಾರ ತಂದಿದ್ದ ರಾಷ್ಟ್ರೀಯ ನ್ಯಾಯಾಧೀಶರ ನೇಮಕ ಸಮಿತಿ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವಾಗ, ‘ದೇಶದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಪ್ರಸ್ತುತ ಶೇ.50ರಷ್ಟು ಜಡ್ಜ್‌ಗಳು, ನ್ಯಾಯಾಧೀಶರ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ’ ಎಂದು ಕೆಲವು ವಕೀಲರು ವಾದಿಸಿದ್ದರು.