ಭಾರತದ ಮೇಲೆ ಅಣು ದಾಳಿ ಬರಹ ಇದ್ದ ಗನ್‌ನಿಂದ ದಾಳಿ

| N/A | Published : Aug 29 2025, 01:00 AM IST

ಸಾರಾಂಶ

ವ್ಯಕ್ತಿಯೊಬ್ಬ ಬುಧವಾರ ಭಾರತದ ಮೇಲೆ ಅಣುದಾಳಿ ಮಾಡಿ ಎಂಬ ಬರಹ ಇದ್ದ ಗನ್ ಮೂಲಕ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

 ನ್ಯೂಯಾರ್ಕ್‌/ವಾಷಿಂಗ್ಟನ್‌: ವ್ಯಕ್ತಿಯೊಬ್ಬ ಬುಧವಾರ ಭಾರತದ ಮೇಲೆ ಅಣುದಾಳಿ ಮಾಡಿ ಎಂಬ ಬರಹ ಇದ್ದ ಗನ್ ಮೂಲಕ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಮಿನ್ನಿಯಾಪೋಲಿಸ್‌ ಎಂಬಲ್ಲಿ ಶಾಲಾ ಮಕ್ಕಳು ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ ರಾಬಿನ್ ವೆಸ್ಟ್‌ಮನ್(23) ಎಂಬಾತ ಕಿಟಕಿಯ ಮೂಲಕ ಗುಂಡಿನ ದಾಳಿ ನಡೆಸಿದ್ದಾನೆ. ಇದರಲ್ಲಿ 8 ಹಾಗೂ 10 ವರ್ಷದ ಇಬ್ಬರು ಮಕ್ಕಳು ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಬಳಿಕ ಆತ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.

ಪಾಕ್‌ ಅಣು ಬೆದರಿಕೆಗೆ ಭಾರತ ಬಗ್ಗಲ್ಲ : ಮೋದಿ

ಈ ದಾಳಿಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಆದರೆ ದಾಳಿಕೋರ ತನ್ನ ಬಂದೂಕು, ರೈಫಲ್‌ ಮತ್ತು ಮದ್ದುಗುಂಡುಗಳನ್ನು ತೋರಿಸುತ್ತಿದ್ದುದು ವಿಡಿಯೋದಲ್ಲಿ ಸೆರೆಯಾಗಿದೆ. ದಾಳಿಗೆ ಬಳಸಿದ ಗನ್‌ ಮೇಲೆ ‘ನ್ಯೂಕ್‌ ಇಂಡಿಯಾ’(ಅಣುದಾಳಿಗೆ ಕರೆ), (ಟ್ರಂಪ್‌ರ ಕೊಲ್ಲಿ) ‘ಮಾಶಲ್ಲಾಹ್‘, ‘ಇಸ್ರೇಲ್‌ ಪತನವಾಗಬೇಕು’ ಎಂದು ಬರೆದಿತ್ತು.

Read more Articles on