ಸ್ವಿಸ್‌ ಬ್ಯಾಂಕ್‌ಲ್ಲಿ ಭಾರತೀಯರ ₹40000 ಕೋಟಿ ಹಣ: ವರದಿ

| N/A | Published : Jun 20 2025, 05:50 AM IST

Swiss Banks

ಸಾರಾಂಶ

2024ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಅಂದಾಜು 40000 ಕೋಟಿ ರು. ಹಣ ಇಟ್ಟಿದ್ದರು. 2023ಕ್ಕೆ ಹೋಲಿಸಿದರೆ ಈ ಪ್ರಮಾಣ 3 ಪಟ್ಟು ಹೆಚ್ಚು ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ನವದೆಹಲಿ/ಜ್ಯೂರಿಚ್: 2024ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಅಂದಾಜು 40000 ಕೋಟಿ ರು. ಹಣ ಇಟ್ಟಿದ್ದರು. 2023ಕ್ಕೆ ಹೋಲಿಸಿದರೆ ಈ ಪ್ರಮಾಣ 3 ಪಟ್ಟು ಹೆಚ್ಚು ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

2023ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿದ್ದ ಭಾರತೀಯರ ಹಣ ಶೇ.70ರಷ್ಟು ಕುಸಿದು 11,027 ಕೋಟಿ ರು.ಗೆ ತಲುಪಿತ್ತು. ಆದರೆ ಕಳೆದ ವರ್ಷ ಮತ್ತೆ ಭಾರತೀಯರ ಇಟ್ಟಿರುವ ಹಣದ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಣವು ಭಾರತದಲ್ಲಿ ಇರುವ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳಲ್ಲಿ ಭಾರತೀಯರು ವಿವಿಧ ಮಾದರಿಯಲ್ಲಿ ಮಾಡಿರುವ ಹೂಡಿಕೆ, ಇಟ್ಟಿರುವ ನಗದು ಸೇರಿದೆ. ಈ ರೀತಿಯ ಹಣ ಅಂದಾಜು 37600 ಕೋಟಿ ರು.ನಷ್ಟಿದೆ. ಆದರೆ ಗ್ರಾಹಕರ ಖಾತೆಯಲ್ಲಿ ಇರುವ ಹಣ 3675 ಕೋಟಿ ರು.ನಷ್ಟಿದೆ. ಇದಕ್ಕೂ ಮೊದಲು, 2006ರಲ್ಲಿ 68,948 ಕೋಟಿ ರು. ಇದ್ದುದು ಅತ್ಯಧಿಕವಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಇದು ಇಳಿಮುಖವಾಗಿ ಸಾಗಿತ್ತು.

ಈ ವರದಿಯು ಸ್ವಿಸ್‌ ಬ್ಯಾಂಕ್‌ಲ್ಲಿ ಇರಬಹುದಾದ ಭಾರತೀಯರ ಕಪ್ಪುಹಣ ಹಾಗೂ ಇತರೆ ದೇಶಗಳ ಸಂಸ್ಥೆ ಮೂಲಕ ಭಾರತೀಯರು ಇಟ್ಟಿರಬಹುದಾದ ಹಣದ ಯಾವುದೇ ಮಾಹಿತಿ ಹೊಂದಿಲ್ಲ.

Read more Articles on