ಸಾರಾಂಶ
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಎಲ್. ಮುರುಗನ್ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದ್ದು, ಪ್ರತಿಸ್ಪರ್ಧಿಗಳು ಇಲ್ಲದ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿದ್ದ 56 ಸ್ಥಾನಗಳ ಪೈಕಿ 41 ಕಡೆ ಅವಿರೋಧ ಆಯ್ಕೆಯಾಗಿದೆ.
ಬಿಜೆಪಿ ಅತಿಹೆಚ್ಚು 20 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ 6, ಟಿಎಂಸಿ 4, ವೈಎಸ್‌ಆರ್ ಕಾಂಗ್ರೆಸ್ 3, ಆರ್‌ಜೆಡಿ 2, ಬಿಜೆಡಿ 2 ಮತ್ತು ಎನ್‌ಸಿಪಿ, ಶಿವಸೇನಾ, ಬಿಆರ್‌ಎಸ್ ಹಾಗೂ ಜೆಡಿಯು ತಲಾ ಒಂದು ಸ್ಥಾನಗಳನ್ನು ಗೆದ್ದಿವೆ.
ಸೋನಿಯಾ ಗಾಂಧಿ ರಾಜಸ್ಥಾನದಿಂದ, ಜೆಪಿ ನಡ್ಡಾ ಗುಜರಾತ್‌ನಿಂದ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಒಡಿಶಾದಿಂದ, ಎಲ್.ಮುರುಗನ್ ಮಧ್ಯಪ್ರದೇಶದಿಂದ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಅಶೋಕ್ ಚೌವಾಣ್ ಮಹಾರಾಷ್ಟ್ರದಿಂದ, ಇತ್ತೀಚೆಗೆ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಬಣದ ಎನ್‌ಸಿಪಿ ಸೇರಿದ್ದ ಮಿಲಿಂದ್ ದೇವ್ರಾ, ಪ್ರಫುಲ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಫೆ.27ರಂದು ಉತ್ತರ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಮತದಾನ ನಡೆಯಲಿದೆ.