ಧರ್ಮದ ಮೇಲೆ ನಂಬಿಕೆ ಹೊಂದಿರದೆ ಮೀಸಲು ಲಾಭಕ್ಕಾಗಿ ಮತಾಂತರ ಸಂವಿಧಾನಕ್ಕೆ ವಂಚನೆ : ಸುಪ್ರೀಂಕೋರ್ಟ್‌

| Published : Nov 28 2024, 12:31 AM IST / Updated: Nov 28 2024, 05:42 AM IST

ಧರ್ಮದ ಮೇಲೆ ನಂಬಿಕೆ ಹೊಂದಿರದೆ ಮೀಸಲು ಲಾಭಕ್ಕಾಗಿ ಮತಾಂತರ ಸಂವಿಧಾನಕ್ಕೆ ವಂಚನೆ : ಸುಪ್ರೀಂಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಧರ್ಮದ ಮೇಲೆ ಯಾವುದೇ ನಂಬಿಕೆ ಹೊಂದಿರದೆ, ಕೇವಲ ಮೀಸಲಾತಿ ಪಡೆಯುವ ಉದ್ದೇಶಕ್ಕೆ ಮತಾಂತರವಾಗುವುದು ಸಂವಿಧಾನಕ್ಕೆ ಮಾಡುವ ವಂಚನೆ’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ನವದೆಹಲಿ: ‘ಧರ್ಮದ ಮೇಲೆ ಯಾವುದೇ ನಂಬಿಕೆ ಹೊಂದಿರದೆ, ಕೇವಲ ಮೀಸಲಾತಿ ಪಡೆಯುವ ಉದ್ದೇಶಕ್ಕೆ ಮತಾಂತರವಾಗುವುದು ಸಂವಿಧಾನಕ್ಕೆ ಮಾಡುವ ವಂಚನೆ’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಧಾರ್ಮಿಕ ಮತಾಂತರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ, ‘ಸರ್ಕಾರ ನೀಡುವ ಮೀಸಲಿನ ಲಾಭಕ್ಕಾಗಿ, ಯಾವುದೇ ಧಾರ್ಮಿಕ ನಂಬಿಕೆಯಿರದೇ ಮತ್ತೊಂದು ಧರ್ಮಕ್ಕೆ ಮತಾಂತರವಾಗುವುದು ಸಂವಿಧಾನದ ಮೇಲಿನ ವಂಚನೆ. ಮತಾಂತರದ ಉದ್ದೇಶ ಮೀಸಲಾತಿ ಪಡೆಯುವುದಾಗಿದ್ದರೆ, ಅದನ್ನು ಅನುಮೋದಿಸಲಾಗುವುದಿಲ್ಲ. ಇಂತಹ ಉದ್ದೇಶಗಳು ಸಾಮಾಜಿಕ ನೀತಿಯನ್ನು ಸೋಲಿಸುತ್ತದೆ’ ಎಂದಿದೆ.

ಇದೇ ವರ್ಷ ಜನವರಿಯಲ್ಲಿ, ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ಮಹಿಳೆ ಎಸ್‌ಸಿ ಪ್ರಮಾಣಪತ್ರಕ್ಕೆ ಕೋರ್ಟ್‌ ಮೊರೆ ಹೋಗಿದ್ದರು. ಆಕೆ ಧರ್ಮದ ಮೇಲೆ ನಂಬಿಕೆ ಇರದೇ ಉದ್ಯೋಗ ಪಡೆಯಲು ಹಿಂದೂಗೆ ಮತಾಂತರವಾಗಿದ್ದಾಳೆ ಎನ್ನುವ ಕಾರಣಕ್ಕೆ ಮದ್ರಾಸ್‌ ಹೈಕೋರ್ಟ್‌ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಮೊರೆ ಹೋಗಿದ್ದರು. ಆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಈ ರೀತಿ ಅಭಿಪ್ರಾಯ ಪಟ್ಟಿದೆ.